ಮುಳ್ಳೇರಿಯ: ಮುಳ್ಳೇರಿಯ ಕಯ್ಯಾರ ಕಿಞ್ಞಣ್ಣರೈ ಗ್ರಂಥಾಲಯದಲ್ಲಿ ಕಾರ್ಯಾಚರಿಸುತ್ತಿರುವ ಬಾಲವೇದಿ ವತಿಯಿಂದ ವಾಚನ ಕಳರಿ-ವರ್ಣಕುಟೀರಂ ಕಾರ್ಯಕ್ರಮದ ಮೂರನೇ ಅಧಿವೇಶನ ಮತ್ತು ಪಯಸ್ವಿನಿ ಹೊಳೆಯನ್ನು ತಿಳಿಯುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಡುಮನೆ ಪ್ರದೇಶ ಮತ್ತು ಪಾಂಡಿ ಅರಣ್ಯ ಪ್ರದೇಶದ ನದಿಯ ರಮಣೀಯ ಸೌಂದರ್ಯವನ್ನು ವೀಕ್ಷಿಸಲಾಯಿತು.
ಕೇರಳ ವಿಜ್ಞಾನ-ಸಾಹಿತ್ಯ ಪರಿಷತ್ ಕಾರ್ಯಕರ್ತ ಪಿ. ಕುಂಞÂ್ಞ ಕಣ್ಣನ್ ಮಕ್ಕಳಿಗೆ ನದಿಯ ಹುಟ್ಟು, ಹರಿವು, ಉಪಯೋಗಗಳ ಬಗ್ಗೆ ವಿವರಿಸಿದರು. ಅದೈತ್ ಕೆ.ಎಸ್. ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೀರ್ತನಾ ಮಹೇಶ್ ಸ್ವಾಗತಿಸಿ, ಕೆ. ರೇವತಿ ರಾಜೇಶ್ ವಂದಿಸಿದರು. ಕೆ.ಕೆ. ಮೋಹನನ್ ಮತ್ತು ಕೆ.ಕೆ. ರಂಜಿತ್ ನೇತೃತ್ವ ವಹಿಸಿದ್ದರು.

.jpg)
