HEALTH TIPS

ಜುಲೈ 10ರಿಂದ ಎಡನೀರುಶ್ರೀಗಳ ಚಾತುರ್ಮಾಸ್ಯ-ನಾಳೆ ಕಾಸರಗೋಡಿನಲ್ಲಿ ಸಮಾಲೋಚನಾ ಸಭೆ

ಬದಿಯಡ್ಕ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಐದನೇ ಚಾತುರ್ಮಾಸ್ಯ ವ್ರತಾಚರಣೆ ಜುಲೈ 10ರಿಂದ ಸೆ. 7ರ ವರೆಗೆ ಶ್ರೀಮಠದಲ್ಲಿ ಜರುಗಲಿದೆ. ಕಾರ್ಯಕ್ರಮದ ಯಶಸ್ವಿಗಾಗಿ ಭಕ್ತಾದಿಗಳ ಸಮಾಲೋಚನಾ ಸಭೆ ಜೂನ್ 28ರಂದು ಸಂಜೆ 5ಕ್ಕೆ ಕಾಸರಗೋಡು ಪೇಟೆ ಶೀ ವೆಂಕಟ್ರಮಣ ದೇವಸ್ಥಾನ ಸಭಾಂಗಣದಲ್ಲಿ ಜರುಗಲಿದೆ ಎಮದು ಪ್ರಕಟಣೆ ತಿಳಿಸಿದೆ.


10ರಂದು 'ವೇಣು ನಿನಾದ':

ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಐದನೇ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಚಾತುರ್ಮಾಸದ ಪ್ರಥಮ ಸಂಗೀತ ಕಾರ್ಯಕ್ರಮ 'ವೇಣು ನಿನಾದ' ಜುಲೈ 10ರಂದು ಸಂಜೆ 5ಕ್ಕೆ ಶ್ರೀಮಠದ ಸಭಾಂಗಣದಲ್ಲಿ ಜರುಗಲಿದೆ.ವಿದ್ವಾನ್ ಶಶಾಂಕ್ ಸುಬ್ರಹ್ಮಣ್ಯಂ ಚೆನ್ನೈ ಕೊಳಲು, ವಿದ್ವಾನ್ ವಿಠಲ್ ರಾಮಮೂರ್ತಿ ಚೆನ್ನೈ ವಯಲಿನ್ ಹಾಗೂ ವಿದ್ವಾನ್ ಪತ್ರಿ ಸತೀಶ್ ಕುಮಾರ್ ಚೆನ್ನೈ ಮೃದಂಗದಲ್ಲಿ ಸಹಕರಿಸುವರು.

ಎಡನೀರುಮಠದಲ್ಲಿ ಭಕ್ತಾದಿಗಳ ಮಹಾಸಭೆ:  

ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಐದನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಜುಲೈ 10ರಿಂದ ಸೆಪ್ಟೆಂಬರ್ 7ರವರೆಗೆ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಎಡನೀರು ಶ್ರೀಮಠದಲ್ಲಿ ಜರಗಲಿದೆ. ಕಾರ್ಯಕ್ರಮದ ಯಶಸ್ವಿಗಾಗಿ ಊರ ಪರಪೂರ ಭಕ್ತಾದಿಗಳ ಮಹಾಸಭೆ ಎಡನೀರು ಶ್ರೀಮಠದಲ್ಲಿ ಜರಗಿತು. 

ಈ ಸಂದರ್ಭ ವಿವಿಧ ಪ್ರದೇಶಗಳಲ್ಲಿ ಪ್ರಾದೇಶಿಕ ಸಮಿತಿ ರಚಿಸುವ ನಿಟ್ಟಿನಲ್ಲಿ ಎಡನೀರು ಶ್ರೀಮಠದ ಭಕ್ತರ ಸಭೆಗಳನ್ನು ಕರೆಯಲು ತೀರ್ಮಾನಿಸಲಾಯಿತು. ಚಾತುರ್ಮಾಸ್ಯ ಸಮಯದಲ್ಲಿ ವಿವಿಧ ವಲಯಗಳಿಂದ ಹೊರೆ ಕಾಣಿಕೆ ಸೇರಿದಂತೆ ವಿವಿಧ ಸೇವೆಗಳನ್ನು ಮಾಡುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.  ಶನಿವಾರ ಹಾಗೂ ಭಾನುವಾರ ದಿನಗಳಂದು ಶ್ರೀಮಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಮರ್ಪಕ ವ್ಯವಸ್ಥೆಗಾಗಿ ವಿವಿಧ ವಲಯದ ಎಡನೀರು ಶ್ರೀಮಠದ ಶಿಷ್ಯ ವೃಂದದ ಕಾರ್ಯಕರ್ತರು ತಮ್ಮ ಸೇವಾ ದಿನಾಂಕವನ್ನು ಹಾಗೂ ವಿವಿಧ ಪ್ರದೇಶಗಳಿಂದ ಬರುವ ಹೊರೆ ಕಾಣಿಕೆಯ ದಿನಾಂಕವನ್ನು ಮುಂಚಿತವಾಗಿ ತಿಳಿಸುವಂತೆ ಕೋರಲಾಯಿತು.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries