ಕಾಸರಗೋಡು: ಹೋಟೆಲ್ ಮಾಲಿಕನ ಕತ್ತಿಗೆ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದ ಅಪರಾಧಿ ಪಯ್ಯನ್ನೂರು ಪೆರುಂದಟ್ಟ ತವಿಡಿಶ್ಯೇರಿ ನಿವಾಸಿ ಶ್ರೀಜಿತ್ ಯಾನೆ ಶಾಜಿ ಎಂಬಾತನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ತೃತೀಯ)ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 45ಸಾವಿರ ರೂ. ದಂಡ ವಿಧಿಸಿ ತೀರ್ಪಿತ್ತಿದೆ. ದಂಡ ಪಾವತಿಸದಿದ್ದಲ್ಲಿ ಅಪರಾಧಿ 10ತಿಂಗಳ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.
2021 ಜ. 23ರಂದು ಚಟ್ಟಂಚಾಲ್ ಪೇಟೆಯಲ್ಲಿರು ಹೋಟೆಲ್ ಒಂದರ ಮಾಲಿಕ ಕೆ.ಎಂ ಗೋಪಾಲನ್ ಎಂಬವರನ್ನು ಇರಿದು ಹತ್ಯೆಗೆ ಯತ್ನಿಸಿರುವ ಬಗ್ಗೆ ಮೇಲ್ಪರಂಬ ಠಾಣೆ ಪೊಲೀಸರು ಕೇಸು ದಾಖಲಿಸಿಕೊಮಡಿದ್ದರು.




