ಪೆರ್ಲ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಉಕ್ಕಿನಡ್ಕಾಸ್ ಆಯುರ್ವೇದದ ಪ್ರಾಯೋಜಕತ್ವ ಹಾಗೂ ಶ್ರೀಮಾತಾ ಯೋಗ ಕೇಂದ್ರದ ಸಹಭಾಗಿತ್ವದಲ್ಲಿ, ಪೆರ್ಲದ ಶಂಕರ್ ಸದನದಲ್ಲಿ ಮಹಿಳೆಯರಿಗಾಗಿ ಜೂ. 14ರಿಂದ ಒಂದು ವಾರದ ಉಚಿತ ಯೋಗ ಶಿಬಿರ ಆಯೋಜಿಸಲಾಗಿದೆ.
ಜೂನ್ 20ರವರೆಗೆ ಪ್ರತಿದಿನ ಸಂಜೆ 4.30 ರಿಂದ 6 ಗಂಟೆಯವರೆಗೆ ತರಬೇತಿ ನಡೆಯಲಿದೆ. ಆಯುರ್ವೇದ ತಜ್ಞೆ ಡಾ. ಸಪ್ನ ಜೆ. ಉಕ್ಕಿನಡ್ಕ ಹಾಗೂ ಯೋಗ ತಜ್ಞೆ ದಿವ್ಯ ಶರ್ಮ ಪಳ್ಳತ್ತಡ್ಕ ಅವರ ನೇತೃತ್ವದಲ್ಲಿ ಶಿಬಿರ ನಡೆಯಲಿದೆ. "ಜೀವನಶೈಲಿ ಸಂಬಂಧಿತ ರೋಗಗಳನ್ನು ತಡೆಗಟ್ಟಲು ಯೋಗ" ಎಂಬ ವಿಷಯದ ಆಧಾರದಲ್ಲಿ ಪ್ರತಿ ದಿನ ಒಂದೊಂದು ಆರೋಗ್ಯ ಸಮಸ್ಯೆಯ ಕುರಿತು ಚರ್ಚಿಸಿ, ಅದರ ತಡೆಗೆ ಅಗತ್ಯವಿರುವ ಯೋಗಾಸನ, ಪ್ರಾಣಾಯಾಮ ಹಾಗೂ ಆಹಾರ ಸಲಹೆಗಳನ್ನು ನೀಡಲಾಗುತ್ತದೆ. ಈ ಶಿಬಿರದ ಮುಖ್ಯ ಉದ್ದೇಶ ಆರೋಗ್ಯಕರ ಜೀವನಶೈಲಿಗೆ ಪ್ರೇರೇಪಿಸುವುದಾಗಿದೆ ಎಂದು ಡಾ. ಸಪ್ನ ಜೆ. ಉಕ್ಕಿನಡ್ಕ ಅವರು ತಿಳಿಸಿದ್ದಾರೆ. ಆಸಕ್ತ ಮಹಿಳೆಯರು ದೂರವಾಣಿ ಸಂಖ್ಯೆ(9645443993)ಮೂಲಕ ಹೆಸರು ನೋಂದಯಿಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.





