ಕಾಸರಗೋಡು: ಪೂಚಕ್ಕಾಡು ಶ್ರೀ ಮಹಾವಿಷ್ಣು ದೇವಾಲಯದ ವಠಾರದಲ್ಲಿ ವಿವಿಧ ಪ್ರಬೇದಗಳ ಔಷಧೀಯ ಗಿಡಗಳನ್ನು ನೆಡಲಾಯಿತು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೀಕಾನ ವೃಂದಾವನ ಬಾಲಗೋಕುಲದ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಈ ಸಂದರ್ಭ ಪರಿಸರ ಸಂರಕ್ಷಣೆಯ ಅಂಗವಾಗಿ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಯಿತು. ದೇವಾಲಯದ ಆಡಳಿತ ಸಮಿತಿ ಕೋಶಾಧಿಕಾರಿ ರವಿವರ್ಮ ಸಸಿನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀನಿ ಜಿಜೇಶ್ ಅಧ್ಯಕ್ಷತೆ ವಹಿಸಿದ್ದರು. ಸತೀಶ್ ಕಾವಾಡಿ, ರಾಜೇಶ್ ಕೀಕಾನ, ವಿಜಯನ್, ಸುಜಾತ, ರಮ್ಯಾ, ವನಶ್ರೀ, ಪ್ರತಿಭಾ, ಪ್ರೀತಿ ಉಪಸ್ಥಿತರಿದ್ದರು. ಬಾಲಗೋಕುಲದ ರಕ್ಷಾಧಿಕಾರಿ ನಿರೀಕ್ಷಾ ಸ್ವಾಗತಿಸಿದರು. ಶ್ರೀ ಲಕ್ಷ್ಮಿ ವಂದಿಸಿದರು.





