ಬದಿಯಡ್ಕ: ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯವರ ಸ್ವರ್ಣ ಪದಕ ವಿಜೇತ ಮಂಗಳೂರು ಸೈಬರ್ ಕ್ರೈಂ ಸಹ ಪೊಲೀಸ್ ಅಧಿಕಾರಿ ಚಂದ್ರಶೇಖರ್ ಹಾಗೂ ಅವರ ಪತ್ನಿ ತೇಜಸ್ವಿ ಭಾನುವಾರ ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರಕ್ಕೆ ಭೇಟಿ ನೀಡಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮುಖಮಂಟಪದ ಕಾಮಗಾರಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಧಾರ್ಮಿಕವಾಗಿಯೂ ಸಾಮಾಜಿಕವಾಗಿಯೂ ಮುಂದುವರಿಯುತ್ತಿರುವ ಶ್ರೀಮಂದಿರದ ಚಟುವಟಿಕೆಗಳನ್ನು ಶ್ಲಾಘಿಸಿದರು. ನಿರ್ಮಾಣ ಕಾರ್ಯಗಳಿಗೆ ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು.
ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಪದಾಧಿಕಾರಿಗಳು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಗೌರವಿಸಿದರು. ಶ್ರೀಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ, ಸುಧಾಮ ಪದ್ಮಾರು, ಅಚ್ಚುತ ಮಾಸ್ತರ್, ಶ್ಯಾಮ ಆಳ್ವ ಕಡಾರು, ರಾಜೇಶ್ ಮಾಸ್ತರ್ ಅಗಲ್ಪಾಡಿ, ರಮೇಶ್ ಕೃಷ್ಣ ಪದ್ಮಾರು, ಶ್ರೀಧರ ಪದ್ಮಾರು, ಸತ್ಯನಾರಾಯಣ ಅಗಲ್ಪಾಡಿ, ಗಿರೀಶ ಅಗಲ್ಪಾಡಿ, ಚಂದ್ರ ಪದ್ಮಾರು, ದೀಪಕ್ ಬೆದ್ರುಕೂಡ್ಲು, ಮಂದಿರದ ಸದಸ್ಯರು, ಬಾಲಗೋಕುಲ ಶಿಕ್ಷಕಿಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




.jpg)
