ಬದಿಯಡ್ಕ: ಬಿಜೆಪಿ ಕುಂಬ್ಡಾಜೆ ಪಂಚಾಯಿತಿ ಸಮಿತಿ ನೇತೃತ್ವದಲ್ಲಿ ಜರಗಿದ ಪಕ್ಷದ ಮುಖಂಡರ ಕಾರ್ಯಾಗಾರವನ್ನು ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಕೆ.ಶ್ರೀಕಾಂತ್ ಉದ್ಘಾಟಿಸಿದರು. ಅವರು ಮಾತನಾಡಿ ಕುಂಬ್ಡಾಜೆ ಗ್ರಾಮಪಂಚಾಯಿತಿಯ ಅಧಿಕಾರವನ್ನು ಮರಳಿ ಪಡೆಯಲು ಪಕ್ಷದ ಕಾರ್ಯಕರ್ತರು ವಾರ್ಡ್ ಮಟ್ಟದಲ್ಲಿ ಸಕ್ರಿಯರಾಗಬೇಕು. ಪ್ರತಿಯೊಂದು ಮನೆಗಳ ಸಂಪರ್ಕ, ಅದರೊಂದಿಗೆ ಮುಂದಿನ ಚುನಾವಣೆಗೆ ಮೊದಲು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಬಾಕಿಯಿರುವವರನ್ನು ಸೇರಿಸುವ ಕಾರ್ಯಕ್ಕೆ ಮುತುವರ್ಜಿ ವಹಿಸಬೇಕು ಎಂದರು.
ಕುಂಬ್ಡಾಜೆ ಪಂಚಾಯಿತಿ ಸಮಿತಿ ಅಧ್ಯಕ್ಷ ಶಶಿಧರ ತೆಕ್ಕೆಮೂಲೆ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ, ಮಂಡಲ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಸುಧಾಮ ಗೊಸಾಡ, ಹರೀಶ್ ನಾರಂಪಾಡಿ, ಶೈಲಜಾ ಭಟ್ ಮಾತನಾಡಿದರು. ಜನಪ್ರತಿನಿಧಿಗಳಾದ ನಳಿನಿ ಕೃಷ್ಣ ಮಲ್ಲಮೂಲೆ, ಯಶೋದಾ ಎನ್, ಸುನಿತಾ ಜೆ ರೈ, ಮೀನಾಕ್ಷಿ ಎಸ್, ಪ್ರಮುಖರಾದ ವಾಸುದೇವ ಭಟ್, ಜಯಪ್ರಕಾಶ್ ಶೆಟ್ಟಿ, ಬಿಕೆ ಸುರೇಶ್, ಪ್ರಮೋದ್ ಭಂಡಾರಿ, ರೋಶಿನಿ ಪೆÇಡಿಪ್ಪಳ, ಹರೀಶ್ ಜೋಗಿ, ರಾಮ ಕೃಷ್ಣ ಭಟ್, ಅಕ್ಷಿತ್ ಮವ್ವಾರು, ಶ್ಯಾಮ್ ಗೋಸಾಡ, ಜನಾರ್ದನ ಪೊಡಿಪ್ಪಳ, ಯೋಗೀಶ್, ಸುರೇಶ್ ಪೊಡಿಪ್ಪಳ, ವಾರ್ಡ್ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.




.jpg)
