ಮುಂಬೈ: ಅಹಮದಾಬಾದ್ ವಿಮಾನ ದುರಂತದ ಬೆನಲ್ಲೇ, ಏರ್‌ಇಂಡಿಯಾವು ಬೋಯಿಂಗ್ ಡ್ರೀಮ್‌ಲೈನರ್ ಸೇರಿದಂತೆ ಕೆಲವು ದೊಡ್ಡ ಗಾತ್ರದ, ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಜುಲೈ ಮಧ್ಯಭಾಗದವರೆಗೆ ಶೇ 15ರಷ್ಟು ಕಡಿತಗೊಳಿಸಿದೆ.
'ಹೆಚ್ಚುವರಿ ಸುರಕ್ಷತಾ ತಪಾಸಣೆ ದೃಷ್ಟಿಯಿಂದ ದೊಡ್ಡ ದೇಹಗಾತ್ರದ ಕೆಲವು ವಿಮಾನಗಳ ಹಾರಾಟವನ್ನು ಕಡಿಮೆ ಮಾಡಲಾಗಿದೆ.
ಕಳೆದ 6 ದಿನಗಳಲ್ಲಿ 83 ಅಂತರರಾಷ್ಟ್ರೀಯ ವಿಮಾನ ಹಾರಾಟವನ್ನು ರದ್ದುಪಡಿಸಲಾಗಿದೆ' ಎಂದು ಏರ್ ಇಂಡಿಯಾ ಪ್ರಕಟಣೆ ತಿಳಿಸಿದೆ.




