ಡೆಹ್ರಾಡೂನ್: ಈ ವರ್ಷದ ಚಾರ್ ಧಾಮ್ ಯಾತ್ರೆಯಲ್ಲಿ 16 ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು. ಭಾರತದಾದ್ಯಂತದಿಂದ ಭಕ್ತರು ಅತ್ಯುತ್ಸಾಹ ಹಾಗೂ ಭಕ್ತಿಭಾವದಿಂದ ಚಾರ್ ಧಾಮ್ ಮತ್ತು ಹೇಮಕುಂಡ್ ಸಾಹಿಬ್ಗೆ ಭೇಟಿ ನೀಡಿದ್ದರು. ನಾಲ್ಕು ಪವಿತ್ರ ಧಾಮಗಳ ಪೈಕಿ ಕೇದಾರನಾಥ ಧಾಮಕ್ಕೆ ಕೇವಲ 30 ದಿನದಲ್ಲಿ 6.5 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡಿದ್ದರು.
ಈ ಧಾಮದ ಮಂದಿರವನ್ನು ಮೇ 2ರಂದು ಭಕ್ತರಿಗೆ ತೆರೆಯಲಾಗಿತ್ತು. ಚಾರ್ ಧಾಮ್ ಯಾತ್ರೆ ಏಪ್ರಿಲ್ 30ರಂದು ಅಧಿಕೃತವಾಗಿ ಆರಂಭವಾಗಿತ್ತು. ಪವಿತ್ರ ದಿನವಾದ ಅಕ್ಷಯ ತೃತೀಯದಂದು ಗಂಗೋತ್ರಿ ಮತ್ತು ಯಮುನೋತ್ರಿ ಧಾಮಗಳನ್ನು ವೇದ ಮಂತ್ರ ಘೊಷಣೆ ಮತ್ತು ಧಾರ್ವಿುಕ ವಿಧಿವಿಧಾನಗಳ ನಡುವೆ ತೆರೆಯಲಾಗಿತ್ತು. ಕೇದಾರನಾಥ ಧಾಮ ಮೇ 2 ಹಾಗೂ ಬದರಿನಾಥ ಧಾಮ ಮೇ 4ರಂದು ಭಕ್ತರ ದರ್ಶನಕ್ಕೆ ಮುಕ್ತಗೊಂಡಿತ್ತು. ಈ ನಾಲ್ಕೂ ಮಂದಿರಗಳು ವರ್ಷದ ಅರು ತಿಂಗಳು ಮಾತ್ರ ತೆರೆದಿರುತ್ತವೆ. ಚಳಿಗಾಲದಲ್ಲಿ (ಅಕ್ಟೋಬರ್-ನವೆಂಬರ್) ಮುಚ್ಚಿದ್ದು ಬೇಸಿಗೆಯಲ್ಲಿ (ಏಪ್ರಿಲ್-ಮೇ) ಪುನಃ ತೆರೆಯಲಾಗುತ್ತದೆ.
ಅಮರನಾಥ ಯಾತ್ರೆ ನೋಂದಣಿ ಪ್ರಾರಂಭ
ನವದೆಹಲಿ: ಈ ಸಾಲಿನ ವಾರ್ಷಿಕ ಅಮರನಾಥ ಯಾತ್ರೆ ಜುಲೈ 3ರಂದು ಆರಂಭವಾಗಲಿದ್ದು ಯಾತ್ರಿಕರ ಸುರಕ್ಷತೆಗಾಗಿ ಸರ್ಕಾರ ಬಿಗಿ ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿದೆ. ಏಪ್ರಿಲ್ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ಲ್ಲಿ ನಡೆದ ಘೊರ ದಾಳಿಯ ನಂತರ ನಡೆಯಲಿರುವ ಪ್ರಥಮ ಯಾತ್ರೆ ಇದಾಗಲಿದ್ದು ಭಯೋತ್ಪಾದಕರ ಸಂಭಾವ್ಯ ಚಲನ ವಲನ ಗಳನ್ನು ತಡೆಯಲು 'ಆಪರೇಷನ್ ಶಿವ' ಯೋಜನೆಯಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಬಿಗಿಗೊಳಿಸಿದೆ. 38 ದಿನಗಳ ಯಾತ್ರೆ ಈ ವರ್ಷದ ರಕ್ಷಾಬಂಧನ ದಿನವಾದ ಆಗಸ್ಟ್ 9ರ ವರೆಗೆ ಮುಂದುವರಿಯಲಿದೆ.
ವೆಬ್ಸೈಟ್ ಮೂಲಕ ನೋಂದಣಿ: ಯಾತ್ರೆಯನ್ನು ನಿರ್ವಹಿಸುವ ಶ್ರೀ ಅಮರನಾಥ ಮಂದಿರ ಮಂಡಳಿ (ಎಸ್ಎಎಸ್ಬಿ) ಏಪ್ರಿಲ್ 15ರಿಂದಲೇ ಯಾತ್ರಿಕರ ಆನ್ಲೈನ್ ಹಾಗೂ ಆಫ್ಲೈನ್ ನೋಂದಣಿ ಕಾರ್ಯವನ್ನು ಆರಂಭಿಸಿದೆ.
ಯಾತ್ರೆಗೆ ಆನ್ಲೈನ್ ಮೂಲಕ ನೋಂದಾಯಿಸಿಕೊಳ್ಳಲು ಬಯಸುವವರು ಎಸ್ಎಎಸ್ಬಿಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನೋಂದಾಯಿಸಿ ಕೊಳ್ಳಬಹುದು. ಆಫ್ಲೈನ್ ನೋಂದಣಿಗಾಗಿ ದೇಶದಾದ್ಯಂತ 540 ಬ್ಯಾಂಕ್ ಶಾಖೆಗಳನ್ನು ಗುರುತಿಸ ಲಾಗಿದೆ. ಈ ಶಾಖೆಗಳಿಗೆ ತೆರಳಿ ಭಕ್ತರು ಹೆಸರನ್ನು ನೋಂದಾಯಿಸಲು ಅವಕಾಶವಿದೆ.




