ನಿನ್ನೆಯಿಂದ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ LPG ಸಿಲಿಂಡರ್ ಬೆಲೆ 1723.50 ರೂ.ಗಳಾಗಿರುತ್ತದೆ. ಏಪ್ರಿಲ್‌ನಲ್ಲಿಯೂ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು 1762 ರೂ.ಗಳಿಗೆ ಇಳಿಸಲಾಗಿತ್ತು. ಫೆಬ್ರವರಿಯಲ್ಲಿ ಇದನ್ನು 7 ರೂ.ಗಳಷ್ಟು ಕಡಿಮೆ ಮಾಡಲಾಗಿತ್ತು. ಆದಾಗ್ಯೂ, ಮಾರ್ಚ್‌ನಲ್ಲಿ ಮತ್ತೆ 6 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಇದೇ ಸಂದರ್ಭದಲ್ಲಿ ದೇಶೀಯ LPG ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಈ ಹೊಸ ಬೆಲೆಯು ವಾಣಿಜ್ಯ ಸಂಸ್ಥೆಗಳು,ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಇತರ ಸಣ್ಣ ವ್ಯವಹಾರಗಳಿಗೆ ಬಿಗ್ ರಿಲೀಫ್ ನೀಡಿದೆ. ತಮ್ಮ ಕಾರ್ಯಾಚರಣೆಗಳಿಗೆ LPG ಅನ್ನೇ ಹೆಚ್ಚಾಗಿ ಅವಲಂಬಿಸಿವೆ. ಭಾರತದಲ್ಲಿ LPG ಬಳಕೆಯ ಸುಮಾರು 90 ಪ್ರತಿಶತವನ್ನು ದೇಶೀಯ ಅಡುಗೆಗೆ ಬಳಸಲಾಗುತ್ತದೆ. ಉಳಿದ 10 ಪ್ರತಿಶತವನ್ನು ಕೈಗಾರಿಕಾ, ವಾಣಿಜ್ಯ ಮತ್ತು ವಾಹನ ವಲಯಗಳಲ್ಲಿ ಬಳಸಲಾಗುತ್ತದೆ. ಅಂದಹಾಗೆ, ಸ್ಥಳೀಯ ತೆರಿಗೆಗಳು ಮತ್ತು ಸಾರಿಗೆ ವೆಚ್ಚಗಳನ್ನು ಅವಲಂಬಿಸಿ LPG ಗ್ಯಾಸ್ ಸಿಲಿಂಡರ್ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.
ಪ್ರಮುಖ ನಗರಗಳಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಇತ್ತೀಚಿನ ಬೆಲೆಗಳು ಇಲ್ಲಿವೆ
* ದೆಹಲಿ: 1,723.50 ರೂಪಾಯಿ
* ಕೋಲ್ಕತ: 1,826 ರೂಪಾಯಿ
* ಮುಂಬೈ: 1,674.50 ರೂಪಾಯಿ
* ಚೆನ್ನೈ: 1,881 ರೂಪಾಯಿ
* ಬೆಂಗಳೂರು: 1820.50 ರೂಪಾಯಿ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಸುಂಕಗಳಿಂದಾಗಿ ಜಾಗತಿಕವಾಗಿ ಕಚ್ಚಾ ತೈಲ ಬೆಲೆಗಳು ಏರಿದ ನಂತರ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮಾರ್ಚ್‌ನಲ್ಲಿ ಎಲ್‌ಪಿಜಿ ದೇಶೀಯ ಸಿಲಿಂಡರ್‌ಗಳ ಬೆಲೆಯನ್ನು ರೂ 50 ರಷ್ಟು ಹೆಚ್ಚಿಸಿತು. ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ $65 ನಲ್ಲಿ ಸ್ಥಿರವಾಗಿದ್ದರೆ, ತೈಲ ಮಾರುಕಟ್ಟೆ ಕಂಪನಿಗಳ ಎಲ್‌ಪಿಜಿ ನಷ್ಟವು 2026 ರ ಆರ್ಥಿಕ ವರ್ಷದಲ್ಲಿ ಸುಮಾರು 45 ಪ್ರತಿಶತದಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಕಳೆದ ಹತ್ತು ವರ್ಷಗಳಲ್ಲಿ ದೇಶೀಯ ಎಲ್‌ಪಿಜಿ ಗ್ರಾಹಕರ ಸಂಖ್ಯೆ ದ್ವಿಗುಣಗೊಂಡಿದೆ. ಇದು ಏಪ್ರಿಲ್ 1, 2025 ರ ಹೊತ್ತಿಗೆ ಸುಮಾರು 33 ಕೋಟಿಗೆ ತಲುಪಿದೆ.




