HEALTH TIPS

ಮಳೆ ನೀರು ಮೊಬೈಲ್ ಮೇಲೆ ಬಿದ್ದರೂ ಉಪಯೋಗಿಸುವುದು ಹೇಗೆ?: ಇಲ್ಲಿದೆ ಟಿಪ್ಸ್

ಈ ವರ್ಷ, ಮುಂಗಾರು (Rain) ನಿಗದಿತ ಸಮಯಕ್ಕಿಂತ ಮೊದಲೇ ಆಗಮಿಸಿದೆ. ಒಂದು ಕಡೆ ಬಿಸಿಲಿನಿಂದ ಮುಕ್ತಿ ಸಿಕ್ಕರೆ, ಮತ್ತೊಂದೆಡೆ ಹಠಾತ್ ಭಾರೀ ಮಳೆ, ಬಿರುಗಾಳಿ ಜನರ ಸಮಸ್ಯೆಗಳನ್ನು ಹೆಚ್ಚಿಸುತ್ತಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಚಂಡಮಾರುತವು ಈಗಾಗಲೇ ಹಾನಿಯನ್ನುಂಟುಮಾಡಿದೆ.

ನೀವು ಪ್ರತಿದಿನ ಈ ಮಳೆಯ ನಡುವೆಯೂ ಹೊರಗೆ ಹೋಗುತ್ತಿದ್ದರೆ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಜೋಪಾನವಾಗಿಡುವುದು ಮುಖ್ಯ. ಮೊಬೈಲ್ ಎಲ್ಲಿ ಒದ್ದೆ ಆಗಿ ಬಿಡುತ್ತೆ ಎಂಬ ಭಯ ಕಾಡುತ್ತಲೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಫೋನ್‌ಗಳು ವಾಟರ್ ಪ್ರೂಫ್ ಆಗಿದ್ದರೂ, ನೀರು ತಾಗಿದರೆ ಹಲವಾರು ಸಮಸ್ಯೆಗಳು ಕಾಡುತ್ತದೆ. ಮಳೆ ನೀರನ್ನು ಬಟ್ಟೆಯಿಂದ ಒರೆಸಿದರೂ ಕೆಲವು ಬಾರಿ ಕೆಲಸ ಮಾಡುವುದಿಲ್ಲ.

ಮಳೆಯಿಂದ ನಿಮ್ಮ ಮೊಬೈಲ್ ಹಾನಿಯಾಗುವುದನ್ನು ತಪ್ಪಿಸಲು ಮೊದಲು ನಿಮ್ಮ ಸ್ಮಾರ್ಟ್​ಫೋನ್ ವಾಟರ್​ಪ್ರೂಫ್ ಹೌದೋ ಅಲ್ಲವೋ ಎಂಬುದನ್ನು ತಿಳಿದುಕೊಳ್ಳಿ. ಇದಕ್ಕಾಗಿ ನೀವು ಫೋನ್‌ನ ಐಪಿ ರೇಟಿಂಗ್ ಅನ್ನು ಪರಿಶೀಲಿಸಬೇಕು. ಫೋನ್ ಖರೀದಿಸುವಾಗ ನೀವು IP67, IP68, IPX8 ಸೇರಿದಂತೆ ವಿವಿಧ ರೇಟಿಂಗ್‌ಗಳನ್ನು ಕೇಳಿರುತ್ತೀರಿ. IP68 ರೇಟಿಂಗ್ ಹೊಂದಿರುವ ಸಾಧನವು 30 ನಿಮಿಷಗಳ ಕಾಲ ನೀರಿನ ಅಡಿಯಲ್ಲಿ ಮುಳುಗಿದ ನಂತರವೂ ಯಾವುದೇ ಹಾನಿ ಆಗುವುದಿಲ್ಲ. ಇದು ವಾಟರ್​ಪ್ರೂಫ್ ಮೊಬೈಲ್ ಆಗಿದೆ.

ನಿಮ್ಮ ಫೋನ್ ಜಲನಿರೋಧಕವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು, ಫೋನ್ IP68 ರೇಟಿಂಗ್ ಅನ್ನು ಹೊಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಬೇಕು. ಫೋನ್ IP68 ರೇಟಿಂಗ್ ಹೊಂದಿಲ್ಲದಿದ್ದರೆ, ಅದನ್ನು ಒದ್ದೆಯಾಗಲು ಬಿಡಬೇಡಿ. ಇದರಿಂದ ಫೋನ್ ಹಾಳಾಗಬಹುದು. ಈ ತೊಂದರೆಯಿಂದ ಪಾರಾಗಲು 99 ರೂ. ಖರ್ಚು ಮಾಡಿ ಸಾಕು.

ಮಳೆಗಾಲದಲ್ಲಿ ಮೊಬೈಲ್ ಮೇಲೆ ನೀರು ಬಿದ್ದರೂ ಉಪಯೋಗಿಸಲು ಜಲನಿರೋಧಕ ಪೌಚ್ ಪಡೆದುಕೊಳ್ಳಿ. ಇದು ವಿಶೇಷವಾದ ಪ್ಲಾಸ್ಟಿಕ್ ಕವರ್ ಆಗಿದೆ. ನಿಮ್ಮ ಫೋನ್ ಅನ್ನು ಅದರೊಳಗೆ ಇಟ್ಟರೆ, ಎಷ್ಟು ಬಾರಿ ನೀರು ತಾಗಿದರೂ ಏನೂ ಆಗುವುದಿಲ್ಲ. ಕವರ್ ಮೇಲಿಂದಲೇ ನೀವು ಫೋನ್ ಅನ್ನು ಬಳಸಬಹುದು. ಏಕೆಂದರೆ ವಾಟರ್​​ಪ್ರೂಫ್ ಪೌಚ್​ಗಳು ಟ್ರಾನ್ಪರೆಂಟ್ ಆಗಿರುತ್ತದೆ. ಈ ಪೌಚ್ ನಿಮ್ಮ ಫೋನ್ ಅನ್ನು ಸಂಪೂರ್ಣವಾಗಿ ಸೀಲ್ ಮಾಡುತ್ತದೆ ಮತ್ತು ನೀರು ಒಳಗೆ ಬರದಂತೆ ತಡೆಯುತ್ತದೆ. ನಿಮ್ಮ ಫೋನ್ ಮಾದರಿಗೆ ಹೊಂದಿಕೆಯಾಗುವ ವಿವಿಧ ರೀತಿಯ ಜಲನಿರೋಧಕ ಪ್ರಕರಣಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ನೀವು ಯಾವುದೇ ಇ-ಕಾಮರ್ಸ್ ವೆಬ್‌ಸೈಟ್‌ಗಳಿಂದ ವಾಟರ್​​ಪ್ರೂಫ್ ಪೌಚ್ ಖರೀದಿಸಬಹುದು. ಫ್ಲಿಪ್‌ಕಾರ್ಟ್, ಅಮೆಜಾನ್‌ನಂತಹ ಜನಪ್ರಿಯ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಇದು ಮಾರಾಟ ಆಗುತ್ತಿದೆ. ಅವುಗಳ ಬೆಲೆ ರೂ. 99 ರಿಂದ ಆರಂಭವಾಗುತ್ತದೆ. ನೀವು 300 ರೂ. ಖರ್ಚು ಮಾಡಿದರೆ ನಿಮ್ಮ ಫೋನ್ ಅನ್ನು ನೀರಿನಿಂದ ಮಾತ್ರವಲ್ಲದೆ ಧೂಳು, ಮರಳಿನಿಂದ ಕೂಡ ರಕ್ಷಿಸಬಹುದು.

ಮಳೆಯಲ್ಲಿ ಫೋನ್ ಬಳಸಿದ ನಂತರ, ಒಣ ಬಟ್ಟೆಯಿಂದ ಫೋನ್ ಅನ್ನು ಚೆನ್ನಾಗಿ ಒರೆಸಿ. ಚಾರ್ಜಿಂಗ್ ಪೋರ್ಟ್ ಮತ್ತು ಹೆಡ್‌ಫೋನ್ ಜ್ಯಾಕ್‌ನಲ್ಲಿ ತೇವಾಂಶ ಉಳಿಯದಂತೆ ನೋಡಿಕೊಳ್ಳಲು ಅವುಗಳನ್ನು ಸ್ವಚ್ಛಗೊಳಿಸಿ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries