HEALTH TIPS

2025ನೇ ಸಾಲಿನ ಸಾಲಿನ ಕೊಡಗಿನ ಗೌರಮ್ಮ ಅಖಿಲ ಭಾರತ ಕಥಾಸ್ಪರ್ಧೆಗೆ ಆಹ್ವಾನ

ಬದಿಯಡ್ಕ: 2025ನೇ ಸಾಲಿನ ಕೊಡಗಿನ ಗೌರಮ್ಮ ದತ್ತಿನಿಧಿ ಹಾಗೂ ಹವ್ಯಕ ಮಹಾಮಂಡಲ ಮಾತೃಮಂಡಳಿ ಸಹಯೋಗದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಹವ್ಯಕ ಮಹಿಳೆಯರಿಗಾಗಿ ಒಂದು ಸಣ್ಣ ಕಥಾ ಸ್ಪರ್ಧೆಯನ್ನು ಅಖಿಲ ಭಾರತ ಮಟ್ಟದಲ್ಲಿ ಆಯೋಜಿಸಲಾಗಿದ್ದು ಕತೆ ನೀಡುವವರು ಈ ಕೆಳಗಿನ ನಿಯಮಾವಳಿಗಳಂತೆ ಕಥೆಗಳನ್ನು ಕಳುಹಿಸಬಹುದಾಗಿದೆ. ಸ್ಪರ್ಧೆಯ ನಿಯಮಾವಳಿಗಳು: 

1.ಹವ್ಯಕ ಮಹಿಳೆಯರು (ವಯೋಮಿತಿ ಇಲ್ಲ, ಹೈಸ್ಕೂಲ್, ಕಾಲೇಜು ವಿದ್ಯಾರ್ಥಿನಿಯರೂ ಭಾಗವಹಿಸಬಹುದು), 2.ಹವ್ಯಕ ಭಾಷೆ.(ಯಾವುದೇ ಸೀಮೆಯ ಹವ್ಯಕ ಭಾಷೆ), 3. ಈ ವರೆಗಿನ ಪ್ರಥಮ ವಿಜೇತೆಯರಿಗೆ ಅವಕಾಶವಿಲ್ಲ, 4. ಈ ವರೆಗೆ ಎಲ್ಲಿಯೂ ಪ್ರಕಟವಾಗಿರದ ಸಾಮಾಜಿಕ ಕಥೆಯಾಗಿರಬೇಕು. 5. ಸಾಧಾರಣ 8 ಪುಟಕ್ಕೆ ಮೀರದಂತೆ, ಕಾಗದದ ಒಂದೇ ಬದಿಗೆ ಸ್ಪುಟವಾಗಿ ಬರೆದಿರಬೇಕು. (ಟೈಪ್ ಮಾಡಿದ್ದಾದರೆ ಉತ್ತಮ. ಎರಡು ಸಾವಿರ ಪದಗಳು). 6. ಬರಹಗಾರರು ತಮ್ಮ ಹೆಸರು, ವಿಳಾಸ, ಸಂಪರ್ಕ ಸಂಖ್ಯೆಯನ್ನು ಬೇರೆ ಕಾಗದದಲ್ಲಿ ಬರೆದು ಲಗತ್ತಿಸಿರಬೇಕು. ಈಮೇಲ್ ಮೂಲಕ ಕಳುಹಿಸಿದರೆ ಸ್ವೀಕಾರಾರ್ಹವಲ್ಲ.


ವಿಜೇತರಿಗೆ ಬಹುಮಾನಗಳು :

ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಕಥೆಗಳಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ನಗದನ್ನು ಬಹುಮಾನವಾಗಿ ನೀಡಲಾಗುವುದು. ಆಸಕ್ತರು 20-08-2025ರ ಮೊದಲು ಕಥೆಗಳು ತಲುಪುವಂತೆ ಅಂಚೆಯ ಮೂಲಕ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.  

ಸಂಚಾಲಕರು, ಧನ್ಯಶ್ರೀ ಸರಳಿ, ಅಶ್ವಿನಿ ಸ್ಟುಡಿಯೋ, ಬಸ್ಸು ತಂಗುದಾಣದ ಮುಂಭಾಗ, ಬದಿಯಡ್ಕ ವಯಾ ಪೆರಡಾಲ-671551, ಕಾಸರಗೋಡು ಜಿಲ್ಲೆ, ಕೇರಳ.

ಮೊ: 9495132198




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries