ಕಾಸರಗೋಡು: ಕೇರಳ ಪ್ರವಾಸಿ ಲೀಗ್ ಕಾಸರಗೋಡು ಮಂಡಲ ಸಮಿತಿ ವತಿಯಿಂದ ಪ್ರವಾಸಿಗಳ ಮಕ್ಕಳಾದ ವಿದ್ಯಾರ್ಥಿಗಳಿಗಾಗಿ 'ವಿಕ್ಟರಿ ಸಮ್ಮಿಟ್ 25' ಎಂಬ ಪ್ರೇರಣಾ ಮತ್ತು ವೃತ್ತಿ ಮಾರ್ಗದರ್ಶನ ತರಗತಿಯನ್ನು ಆಯೋಜಿಸುತ್ತಿದೆ.
ಕತಾರ್ ಕೆಎಂಸಿಸಿ ಕಾಸರಗೋಡು ಮಂಡಲ ಸಮಿತಿಯ ಸಹಯೋಗದೊಂದಿಗೆ ಜೂನ್ 17 ರಂದು ಮಧ್ಯಾಹ್ನ 2 ಗಂಟೆಗೆ ಕಾಸರಗೋಡು ನಗರಸಭೆಯ ಸಮ್ಮೇಳನ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಸಂಘಟನೆ ಪದಾಧಿಕಾರಿ ಜಾಫರ್ ಎರಿಯಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರವಾಸಿಗರ ಕಲ್ಯಾಣ, ಸೌಕರ್ಯ ಮತ್ತು ಪುನರ್ವಸತಿ ಕ್ಷೇತ್ರಗಳಲ್ಲಿ ಹಲವು ಚಟುವಟಿಕೆಗಳನ್ನು ನಡೆಸುತ್ತಿರುವ ಕೇರಳ ಪ್ರವಾಸಿ ಲೀಗ್ ಕಾಸರಗೋಡು ಮಂಡಲ ಸಮಿತಿಯು, ಕಷ್ಟಗಳನ್ನು ಎದುರಿಸುತ್ತಿರುವ ವಲಸಿಗರಿಗಾಗಿ ನಿರಂತರವಾಗಿ ಸಹಾಯ ಸಹಕಾರ ನೀಡುತ್ತಿದೆ.
'ವಿಕ್ಟರಿ ಸಮ್ಮಿಟ್ 25' ಕಾರ್ಯಕ್ರಮದ ಅಂಗವಾಗಿ ಉನ್ನತ ಫಲಿತಾಂಶ ದಾಖಲಿಸಿರುವ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ನಡೆಯುವುದು. ಇದು ಪ್ರವಾಸಿ ಲೀಗ್ ಕಾಸರಗೋಡು ಮಂಡಲ ಸಮಿತಿ ವ್ಯಾಪ್ತಿಯ ಮಕ್ಕಳಿಗೆ ಸೀಮಿತವಾಗಿರುತ್ತದೆ. ಸುದ್ದಿಗೋಷ್ಠಿಯಲ್ಲಿ ಕುಞËಮು ಬೆದಿರ, ಖಾದರ್ ಹಾಜಿ ಚೆಂಗಳ, ಹಸೈನಾರ್ ಹಾಜಿ ತಳಂಗರ, ಮಜೀದ್ ಸಂತೋಷ ನಗರ, ಮತ್ತು ಬಶೀರ್ ಬಂಬ್ರಾಣಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.




