ಕಾಸರಗೋಡು: ಜಿಲ್ಲೆಯ ಜನತೆಯನ್ನು ತತ್ತರಿಸುವಂತೆ ಮಾಡಿದ್ದ ಬಿರುಸಿನ ಮಳೆಗೆ ಶನಿವಾರ ಅಲ್ಪ ವಿರಾಮ ದೊರೆತಿದ್ದು, ತುಂಬಿಹರಿಯುತ್ತಿದ್ದ ಹೊಳೆ, ತೋಡುಗಳಲ್ಲಿ ನೀರಿನ ಪ್ರಮಾಣ ಇಳಿಯತೊಡಗಿದೆ. ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆಯನ್ವಯ ಮುಂದಿನ ಐದು ದಿವಸಗಳ ಕಾಲ ರಾಜ್ಯದಲ್ಲಿ ಬಿರುಸಿನ ಮಳೆಯಾಗುವ ಸಾಧ್ಯತೆಯಿದ್ದು, ಶನಿವಾರವೂ ಕಾಸರಗೋಡು ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಜಾರಿಗೊಳಿಸಲಾಗಿತ್ತು.
ಕೇರಳದಲ್ಲಿ ಪ್ರಕೃತಿಕ ವಇಕೋಪಕ್ಕೆ ಏಳು ಮಂದಿ ಬಲಿಯಾಗಿದ್ದು, ರಾಜ್ಯದಲ್ಲಿ ಹತ್ತು ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ. ಕಸರಗೋಡು ಜಿಲ್ಲೆಯ ವಿವಿಧೆಡೆ ನೆರೆಪೀಡಿತ ಪ್ರದೇಶದಿಂದ ಒಟ್ಟು 326ಮಂದಿಯನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಮಧೂರು ಹಾಗೂ ಪಟ್ಲ ವ್ಯಾಪ್ತಿಯಲ್ಲಿ ಬಯಲುಪ್ರದೇಶದಲ್ಲಿ ನೆರೆನೀರು ತುಂಬಿಕೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
(ಪೋಟೋ: ಮಧೂರು ಪಟ್ಲ ಪ್ರದೇಶದಲ್ಲಿ ಶನಿವಾರವೂ ನೆರೆನೀರು ಮನೆವಠಾರದಲ್ಲಿ ತುಂಬಿಕೊಂಡಿತ್ತು.)





