ಕಾಸರಗೋಡು: ಸರ್ಕಾರದ ತೆರಿಗೆಯೇತರ ಆದಾಯದ ಹೆಚ್ಚಿನ ಭಾಗ ಲಾಟರಿ ವಲಯದಿಂದಲೇ ಬರುತ್ತಿರುವುದಾಗಿ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ) ಪಿ.ಅಖಿಲ್ ತಿಳಿಸಿದ್ದಾರೆ. ಅವರು ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಲಾಟರಿ ಕಲ್ಯಾಣ ನಿಧಿ ಸದಸ್ಯರ ಸಭೆಯಲ್ಲಿ 2024 ರ ಮಕ್ಕಳ ಶೈಕ್ಷಣಿಕ ವಿದ್ಯಾರ್ಥಿವೇತನದ ಜಿಲ್ಲಾ ಮಟ್ಟದ ವಿತರಣೆ ಉದ್ಘಾಟಿಸಿ ಮಾತನಾಡಿದರು.
ಎಂಜಿನಿಯರಿಂಗ್ ವಿದ್ಯಾರ್ಥಿ ಎನ್.ಸಿ. ಸ್ನೇಹತುಲ್ ಕೃಷ್ಣ ಅವರಿಗೆ ಸಾಂಕೇತಿಕವಾಗಿ ಚೆಕ್ ಹಸ್ತಾಂತರಿಸುವ ಮೂಲಕ ಶೈಕ್ಷಣಿಕ ವಿದ್ಯಾರ್ಥಿವೇತನ ವಿತರಣೆಗೆ ಚಾಲನೆ ನೀಡಿದರು. ರಾಜ್ಯ ಲಾಟರಿ ಕಲ್ಯಾಣ ನಿಧಿ ಮಂಡಳಿ ಸದಸ್ಯ ವಿ. ಬಾಲನ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಲಾಟರಿ ಸಂಸ್ಥೆಗಳ ಪ್ರತಿನಿಧಿಗಳಾದ ಇ.ಕುಞÂರಾಮನ್, ಕೆ.ಎಂ.ಶ್ರೀಧರನ್, ಪಿ.ವಿ.ಉಮೇಶನ್, ಮಧುಸೂದನನ್ ನಂಬಿಯಾರ್,ವಿ ಬಿ ಸತ್ಯನಾಥನ್, ಎನ್ ಕೆ ಬಿಜುಮೋನ್, ಎಂ ಆರ್ ರಾಜೇಶ್, ಮತ್ತು ಅರ್ಜುನನ್ ತಾಯಲಂಗಡಿ ಉಪಸ್ಥಿತರಿದ್ದರು. ಜಿಲ್ಲಾ ಲಾಟರಿ ಅಧಿಕಾರಿ ಎಂ.ಕೆ. ರಜಿತ್ ಕುಮಾರ್ ಸ್ವಾಗತಿಸಿದರು. ಜಿಲ್ಲಾ ಲಾಟರಿ ಕಲ್ಯಾಣ ನಿಧಿ ಅಧಿಕಾರಿ ಎಂ.ವಿ. ರಾಜೇಶ್ ಕುಮಾರ್ ವಂದಿಸಿದರು.





