ಭಾರತದ ಸೇನೆಯ MI-02 ಮತ್ತು MI-41 ಹೆಲಿಕಾಪ್ಟರ್‌ಗಳು ಛಾಟೆನ್ ಪ್ರದೇಶದಿಂದ 36 ಜನರನ್ನು ಎರಡು ಹಂತಗಳಲ್ಲಿ ಪಾಕ್ಯೊಂಗ್ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ತಲುಪಿಸಿವೆ.
ಪ್ರಥಮ ಹಂತದಲ್ಲಿ MI-02 17 ಜನರನ್ನು, ಬಳಿಕ MI-41 19 ಜನರನ್ನು ಸಾಗಿಸಿತು. ಉಳಿದವರ ರಕ್ಷಣೆಗೆ ಹೆಲಿಕಾಪ್ಟರ್ ಮತ್ತೆ ಛಾಟೆನ್ ಕಡೆ ತೆರಳಿದೆ. ಪಾಕ್ಯೊಂಗ್‌ನಲ್ಲಿ ಆರೋಗ್ಯ ತಪಾಸಣಾ ಶಿಬಿರ ಮತ್ತು ಗ್ಯಾಂಗ್ಟಾಕ್‌ಗೆ ಬಸ್ ವ್ಯವಸ್ಥೆ ಮಾಡಲಾಗಿದೆ.
ಹವಾಮಾನ ವೈಪರೀತ್ಯ ಮತ್ತು ಭೂಕುಸಿತದಿಂದಾಗಿ ಉತ್ತರ ಸಿಕ್ಕಿಂ ಸಂಪರ್ಕ ಕಡಿತಗೊಂಡಿದ್ದು, ಪ್ರವಾಸಿಗರ ರಕ್ಷಣಾ ಕಾರ್ಯ ಮುಂದುವರಿದಿದೆ.




