ಅಖೌರಾ (ತ್ರಿಪುರ) ಹಾಗೂ ಪೆಟ್ರಾಪೋಲ್-ಬೆನಾಪೋಲ್ (ಪಶ್ಚಿಮ ಬಂಗಾಳ) ಮುಂತಾದ ಪ್ರಮುಖ ವ್ಯಾಪಾರ ಗಡಿಗಳಲ್ಲಿ ಜೂನ್ 9 ರಿಂದ 14ರವರೆಗೆ ವ್ಯಾಪಾರ ಬಂದ್ ಆಗಲಿದೆ.
ಬಾಂಗ್ಲಾದೇಶ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ವಲಸೆ ಸೇವೆಗಳು ಎಂದಿನಂತೆ ಮುಂದುವರಿಯುತ್ತವೆ. ಮೀನಿನಿಂದ ಮಸಾಲೆಯವರೆಗೆ ನಾನಾ ವಸ್ತುಗಳ ಆಮದು-ರಫ್ತು ಕೂಡ ಈ ಅವಧಿಯಲ್ಲಿ ಸ್ಥಗಿತವಾಗಲಿದೆ.




