HEALTH TIPS

ಕಾಸರಗೋಡು ನಗರಸಭಾ ಕಚೇರಿಗೆ ವಿಜಿಲೆನ್ಸ್ ದಾಳಿ-37.21 ಲಕ್ಷ ರೂ. ಭ್ರಷ್ಟಾಚಾರ ಬಯಲಿಗೆ

ಕಾಸರಗೋಡು: ನಗರದ ಪಿಲಿಕುಂಜೆಯಲ್ಲಿ ಕಾರ್ಯಾಚರಿಸುತ್ತಿರುವ ನಗರಸಭಾ ಕಚೇರಿಗೆ ವಿಜಿಲೆನ್ಸ್ ಅಧಿಕಾರಿಗಳು ದಾಳಿ ನಡೆಸಿದ್ದು, ವ್ಯಾಪಕ ಭ್ರಷ್ಟಾಚಾರ ಪತ್ತೆಹಚ್ಚಿದ್ದಾರೆ. ವಿವಿಧ ಅಗತ್ಯಗಳಿಗಾಗಿ 2020ರಿಂದ 2025ರ ಕಾಲಾವಧಿಯಲ್ಲಿ ತನ್ನ ಸಿಬ್ಬಂದಿಗೆ ಮುಂಗಡವಾಗಿ ಪಾವತಿಸಲಾಗಿರುವ3721088ರೂ. ಮೊತ್ತಕ್ಕೆ ಸೂಕ್ತ ಬಿಲ್ ಹಾಜರುಪಡಿಸದಿರುವುದಲ್ಲದೆ, ಈ ಮೊತ್ತಕ್ಕೆ ಅಗತ್ಯವಿರುವ ಬಡ್ಡಿ ವಸೂಲಿ ಮಾಡದೆ ವಂಚನೆಯೆಸಗಿರುವುದು ತನಿಖೆಯಿಂದ ಪತ್ತೆಹಚ್ಚಲಾಗಿದೆ. 

ನಗರಸಭಾ ಕಚೇರಿಯ ತುರ್ತು ಅಗತ್ಯ ನೆರವೇರಿಸಲು ಇದೇ ಕಚೇರಿಯಿಂದ ಸಾಮಾನ್ಯವಾಗಿ ಮುಂಗಡ ಹಣ ಮಂಜೂರುಮಾಡಲಾಗುತ್ತಿದ್ದು, ಈ ಮೊತ್ತವನ್ನು ಮೂರು ತಿಂಗಳೊಳಗೆ ಮರುಪಾವತಿಸಬೇಕಾಗುತ್ತದೆ. ಅಲ್ಲದೆ ಈ ಮೊತ್ತವನ್ನು ವೆಚ್ಚಮಾಡಿರುವ ಬಗ್ಗೆ ಸೂಕ್ತ ಬಿಲ್ ನಗರಸಭಾ ಕಚೇರಿಗೆ ಹಾಜರುಪಡಿಸಬೇಕು.  ಜತೆಗೆ ನಿಗದಿತ ಸಮಯಕ್ಕೆ ಹಣ ಮರುಪಾವತಿಮಾಡದಿದ್ದಲ್ಲಿ, ಈ ಮೊತ್ತಕ್ಕೆ ಶೇ. 18ರ ಬಡ್ಡಿದರದಲ್ಲಿ ವಸೂಲಿಮಾಡುವಂತೆಯೂ ನಿಬಂಧನೆಯಿದೆ. 2019ರಲ್ಲಿ ಇದೇ ರೀತಿ ಸಿಬ್ಬಂದಿಗೆ ನೀಡಿರುವ 15ಲಕ್ಷ ರಊ. ಮುಂಗಡಹಣ ವಾಪಾಸುಮಾಡದೆ, ಇದರ ಬಿಲ್ಲುಗಳನ್ನೂ ನೀಡದೆ ವಂಚನೆಯೆಸಗಿರುವ ಬಗ್ಗೆ ವಿಜಿಲೆನ್ಸ್‍ಗೆ ದೂರು ಲಭಿಸಿದ್ದ ಹಿನ್ನೆಲೆಯಲ್ಲಿ ದಾಳಿ ಆಯೋಜಿಸಲಾಗಿತ್ತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries