ಕಾಸರಗೋಡು: ಅಹಮ್ಮದಾಬಾದ್‍ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿರುವ ಪತ್ತನಂತಿಟ್ಟ ಜಿಲ್ಲೆಯ ಕೋಯಂಜೇರಿ ಪುಲ್ಲಾಡ್ ನಿವಾಸಿ ರಂಜಿತಾ ಆರ್. ನಾಯರ್(39)ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿ ಸಂದೇಶ ರವಾನಿಸಿರುವ ಕಾಸರಗೋಡು ವೆಳ್ಳರಿಕುಂಡು ತಾಲೂಕು ಕಚೇರಿಯ ಉಪ ತಹಸೀಲ್ದಾರ್ ಎ. ಪವಿತ್ರನ್‍ಗೆ ಸರ್ಕಾರಿ ಸೇವೆಯಲ್ಲಿ ಮುಂದುವರಿಯುವ ಅರ್ಹತೆ ಕಳೆದುಕೊಂಡಿರುವುದಾಗಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ.
ಪವಿತ್ರನ್ ವಿರುದ್ಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಬಿಎಸ್‍ಎಸ್‍ನ 75, 79 ಹಗೂ 67(ಎ)ಕಯ್ದೆಗಳನ್ವಯ ಕೇಸು ದಾಖಲಿಸಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಎರಡುಬರಿ ಎಚ್ಚರಿಕೆ, ಎರಡು ಬಾರಿ ಅಮಾನತಿನ ಜತೆಗೆ ಪ್ರಸಕ್ತ ನ್ಯಾಯಾಂಗ ಬಂಧನದಲ್ಲಿಕಳೆಯುತ್ತಿರುವ ಪವಿತ್ರನ್ ತನ್ನ 'ಪವಿ ಆನಂದಾಶ್ರಮ'ಎಂಬ ಫೇಸ್‍ಬುಕ್ ಪೋಸ್ಟ್ ಮೂಲಕ ನಾಲ್ಕು ಸಾವಿರಕ್ಕೂ ಹೆಚ್ಚು ಫಾಲೋವರ್ಸ್‍ಗಳನ್ನು ಹೊಂದಿದ್ದಾನೆ. ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪವಿತ್ರನ್ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ವರದಿ ಸಲ್ಲಿಸಿರುವ ಜಿಲ್ಲಾಧಿಕಾರಿ, ವಿಮಾನ ಅಪಘಾತದಲ್ಲಿ ಸಾವನ್ನಪ್ಪಿರುವ ರಂಜಿತಾ ಆರ್. ನಾಯರ್ ವಿರುದ್ಧ ಕಮೆಂಟ್ ಹಾಕಿರುವ ಈತನನ್ನು ಸರ್ಕಾರಿ ಉದ್ಯೋಗದಿಂದ ವಜಾ ಮಾಡುವಂತೆಯೂ ವರದಿಯಲ್ಲಿ ತಿಳಿಸಿದ್ದಾರೆ.
'ಪವಿ ಆನಂದಾಶ್ರಮ'ಎಂಬ ಪ್ರೊಫೈಲ್‍ನಿಂದ ಈತ ಅಶ್ಲೀಲ ಸಂದೇಶ ಹಾಗೂ ಸ್ತ್ರೀಸಮೂಹವನ್ನು ಅಪಮಾನಿಸುವ ರೀತಿಯ ಕಮೆಂಟ್ ಪೋಸ್ಟ್ ಮಾಡಿದ್ದು, ಬಗ್ಗೆ ವಿವಾದ ಹುಟ್ಟಿಕೊಳ್ಳುತ್ತಿದ್ದಂತೆ ನಂತರ ಡಿಲೀಟ್ ಮಾಡಿದ್ದ ಈತನನ್ನು ನಂತರ ಪೊಲೀಸರು ಬಂಧಿಸಿದ್ದರು.


