HEALTH TIPS

ನ್ಯಾಯಾಲಯ ಖುಲಾಸೆಗೊಳಿಸಿದ ವ್ಯಕ್ತಿಗೆ ಬೆದರಿಕೆ ಸಂದೇಶ- ಒಬ್ಬನ ಬಂಧನ

ಕುಂಬಳೆ : ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯ ಖುಲಾಸೆಗೊಳಿಸಲ್ಪಟ್ಟ ಯುವಕಗೆ ಬೆದರಿಕೆ ಸಂದೇಶ ರವಾನಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಮ್ತಿಯಾಸ್ ಎಂಬಾತನನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಹಕೀಂ ಎಂಬಾತನ ವಿರುದ್ಧ  ಕೇಸು ದಾಖಲಿಸಲಾಘಿದೆ. 

ಎಡನಾಡು ಕಟ್ಟತ್ತಡ್ಕ ನಿವಾಸಿ ಅರುಣ್‍ಕುಮಾರ್ ನೀಡಿದ ದೂರಿನನ್ವಯ ಈ ಬಂಧನ ನಡೆದಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿ ಅರುಣ್‍ಕುಮಾರ್ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಇತ್ತೀಚೆಗೆ ವಿಚಾರಣೆ ನಡೆಸಿ, ಆರೋಪ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ಇವರನ್ನು ಖುಲಾಸೆಗೊಳಿಸಿತ್ತು. ಈ ದ್ವೇಷದಿಂದ ತಂಡ ತನ್ನ'ಪೊಲಿಟಿಕ್ಸ್ ಓನ್ಲಿ'ಎಂಬ ವಾಟ್ಸಪ್ ಗ್ರೂಪಿನಿಂದ ಬೆದರಿಕೆ ಸಂದೇಶ ಕಳುಹಿಸಿರುವ ಬಗ್ಗೆ ಅರುಣ್‍ಕುಮರ್ ಪೊಲೀಸರಿಗೆ ದೂರು ನೀಡಿದ್ದರು.  ಸಂದೇಶದಲ್ಲಿ ಅರುಣ್‍ಕುಮಾರ್ ಅವರ ಮನೆಗಿರುವ ಹಾದಿಯನ್ನು ನಮೂದಿಸಿ, 'ಸಮಯ, ಸಂದರ್ಭ, ಪರಿಸ್ಥಿತಿಗನುಸರಿಸಿ ಆ ಕಡತವನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದು'ಎಂಬ ಸಂದೇಶ ಪ್ರಚಾರಪಡಿಸಲಾಗಿತ್ತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries