ಮಧೂರು: ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನದಲ್ಲಿ ಪರಮಪೂಜ್ಯ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿಯವರ 74 ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಜರಗಿತು. ಕಾಸರಗೋಡು ಜಿಲ್ಲಾ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಕೋಶಾಧಿಕಾರಿ, ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಅಧ್ಯಾಪಕ ಸತೀಶ್ ಮಾಸ್ತರ್ ಕೂಡ್ಲು ದೀಪ ಪ್ರಜ್ವಲನೆಗೈದು ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ವಿಶ್ರಾಂತ ಎ.ಡಿ.ಎಂ ವಿದ್ಯಾರತ್ನ ಕುಂಬಳೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪುತ್ತೂರು ರಾಮಕ್ಷತ್ರಿಯ ಸೇವಾ ಸಂಘ ಅಧ್ಯಕ್ಷ ಸುರೇಶ್ ಕುಮಾರ್ ಕೆಮ್ಮಿಂಜೆ, ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಚಂದ್ರಗಿರಿ ಉಪಸಂಘ ಅಧ್ಯಕ್ಷ ಸಿ.ಎಚ್.ಹರೀಶ್ಚಂದ್ರ, ನಿವೃತ್ತ ಅಧ್ಯಾಪಕಿ ಉಷಾ ಟೀಚರ್ ಪಾರೆಕಡವು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಸಮಾಜ ಸೇವೆ ಹಾಗು ಧಾರ್ಮಿಕ ಕ್ಷೇತ್ರದಲ್ಲಿನ ಕೊಡುಗೆಗಾಗಿ ಬಿ.ಪಿ.ವೆಂಕಟ್ರಮಣ ಅವರಿಗೆ ಶ್ರೀ ಭಿಕ್ಷು ಗೌರವಾರ್ಪಣೆ ಹಾಗು ಕೇರಳ ರಾಜ್ಯ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿಪದಕ ಪಡೆದ ಯುವ ಪ್ರತಿಭೆ ನಿಷ್ಮಾ ಬಿ.ಎಂ. ಅವರಿಗೆ ಶ್ರೀ ಭಿಕ್ಷು ಕ್ರೀಡಾ ಗೌರವ ನೀಡಿ ಸಮ್ಮಾನಿಸಲಾಯಿತು.
ಶ್ರೀ ಭಿಕ್ಷು ಲಕ್ಷ್ಮಣಾನಂದ ಸರಸ್ವತಿ ಮಹಿಳಾ ಭಜನಾ ಸಂಘ ಅಣಂಗೂರು ಮತ್ತು ಶ್ರೀ ರಾಮನಾಥ ಮಹಿಳಾ ಭಜನಾ ವೃಂದ ಕೋಟೆಕಣಿ ಅವರಿಂದ ಶ್ರೀ ಭಿಕ್ಷು ನಾಮಾವಳಿ ನಡೆಯಿತು.
ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಘಟಕ ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಕಾವ್ಯ ಕುಶಲ ವಂದಿಸಿದರು.

.jpg)
