ಉಪ್ಪಳ: ಸೇವಾಭಾರತಿ ಜೋಡುಕಲ್ಲು ಇದರ ಆಶ್ರಯದಲ್ಲಿ ಭಾನುವಾರ ನಡೆದ ಸಾರ್ವಜನಿಕ ಗಣೇಶೋತ್ಸವ ಸಮಿತಿ ರಚನಾ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷೆಯ ಆಗಮನದಿಂದ ರೊಚ್ಚಿಗೆದ್ದ 30 ಕ್ಕಿಂತ ಅಧಿಕ ಕಾರ್ಯಕರ್ತರು ಸಭೆಯಿಂದ ಹೊರನಡೆದ ಘಟನೆ ನಡೆದಿದ್ದು, ಪೈವಳಿಕೆ ಪಂಚಾಯತಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷೆಗೆ ಮತ್ತೊಮ್ಮೆ ಮುಖಬಂಗ ಉಂಟುಮಾಡಿದೆ.
ಮಂಜೇಶ್ವರ ಬಿಜೆಪಿ ಮಂಡಲ ಸಮಿತಿ ಸದಸ್ಯ ಪ್ರಶಾಂತ ಕೆ.ಪಿ. ಜೋಡುಕಲ್ಲು ಅವರನ್ನು ಪಕ್ಷದಿಂದ ಏಕಾಏಕಿ ಹೊರಹಾಕಿದ ವಿಷಯ ಚರ್ಚೆಯಲ್ಲಿ ಇರುವಾಗಲೇ ಆಹ್ವಾನವಿಲ್ಲದೆ ಆಗಮಿಸಿದ್ದು ಕಾರ್ಯಕರ್ತರನ್ನು ರೊಚ್ಚಿಗೆಬ್ಬಿಸುವಂತೆ ಮಾಡಿತು. ಈ ಬಗ್ಗೆ ಕಾರ್ಯಕರ್ತರು, ಪದಾಧಿಕಾರಿಗಳು ಬಿಜೆಪಿ ಜಿಲ್ಲಾ ಅಧ್ಯಕ್ಷರನ್ನು ಆಮಂತ್ರಿಸಿಲ್ಲ ಎಂದು ತಿಳಿಯಪಡಿಸಿದ್ದು ಮಾತ್ರವಲ್ಲದೆ ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ ಹಿರಿಯರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಆಮಂತ್ರಣ ಇಲ್ಲದೆ ಭಾಗವಹಿಸಿ ಆ ಪೋಟೋವನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷೆ ತಮ್ಮ ಫೇಸ್ ಬುಕ್ ಪೋಸ್ಟ್‍ನಲ್ಲಿ ಇದು ಬಿಜೆಪಿ ಜಿಲ್ಲಾ ಸಮಿತಿ ನಡೆಸಿದ ಕಾರ್ಯಕ್ರಮವೆಂದು ಬಿಂಬಿಸಿರುವರು. ಇದು ಕಾರ್ಯಕರ್ತರಲ್ಲಿ ಬೇಸರವನ್ನುಂಟು ಮಾಡಿದೆ. ಕಾಸರಗೋಡು ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಕಳೆದ 35 ವರ್ಷಗಳಿಂದ ಬಹಳ ವಿಜೃಂಭಣೆಯಿಂದ ನಡೆಯುತ್ತಿರುವ ಗಣೇಶೋತ್ಸವಕ್ಕೆ ಈ ಒಂದು ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರ ಆಗಮನ ಕಪ್ಪು ಚುಕ್ಕೆಯಾಗಿದೆ. ಇನ್ನಾದರೂ ಇಷ್ಟು ಸಾಮಾನ್ಯ ಜ್ಞಾನವಿಲ್ಲದ ಇವರನ್ನು ತಿದ್ದಿ ಸರಿಪಡಿಸುವುದು ಯಾರು ಎಂಬ ಚಿಂತೆ ಕಾರ್ಯಕರ್ತರಲ್ಲಿ ಇಕ್ಕಟ್ಟಿಗೆ ಕಾರಣವಾಗಿದೆ ಎಂದು ದೂರಲಾಗಿದೆ.

