ಪೆರ್ಲ: ಬಿಜೆಪಿ ಎಣ್ಮಕಜೆ ಪಂಚಾಯತ್ ಸಮಿತಿ ವತಿಯಿಂದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಸಂಸ್ಮರಣಾ ಕಾರ್ಯಕ್ರಮ ಪಂಚಾಯತ್ ಸ,ಇತಿ ಕಾರ್ಯಾಲದಲ್ಲಿ ಜರಗಿತು. ಬಿಜೆಪಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಮುರಳಿಧರ್ ಯಾದವ್ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಛಾಯಚಿತ್ರಕ್ಕೆ ಪುಷ್ಪರ್ಚನೆಗೈದು ಸಮಾರಂಭ ಉದ್ಘಾಟಿಸಿದರು.
ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಪಿ ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯತ್ ಸದಸ್ಯ ಬಟ್ಟುಶೆಟ್ಟಿ ಕಾಟುಕುಕೆ, ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಆಶಾಲತಾ, ಇಂದಿರಾ, ನೇತಾರರಾದ, ಪುಷ್ಪಾ ಆಮೆಕ್ಕಳ, ಟಿ ಪ್ರಸಾದ್, ಪದ್ಮಶೇಖರ, ಶಿವರಾಮ, ಮಮತಾ ಯು ರೈ, ನಾರಾಯಣ ಪ್ರಸಾದ್ ಕೂಟೆಲು ಮೊದಲದವರು ಉಪಸ್ಥಿತರಿದ್ದರು. ಮಂಡಲ ಸಮಿತಿ ಕಾರ್ಯದರ್ಶಿ ಸುಮಿತ್ ರಾಜ್ ಸ್ವಾತಿಸಿದರು. ಗ್ರಾಮ ಪಂಚಾಯಿತಿ ಸದಸ್ಯೆ ಉಷಾ ಗಣೇಶ್ ವಂದಿಸಿದರು.


