HEALTH TIPS

ಕನ್ನಡ ಭವನದಿಂದ ಮಂಗಳೂರಿನಲ್ಲಿ ಮನೆ ಮನೆ ಕನ್ನಡ ಜಾಗೃತಿ ಅಭಿಯಾನ

ಕಾಸರಗೋಡು: ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ, ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ದ.ಕ. ಜಿಲ್ಲಾ ಘಟಕ, ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಇವರ ಸಂಯುಕ್ತ ಆಶಯದಲ್ಲಿ ಮನೆ ಮನೆ ಕನ್ನಡ ಜಾಗೃತಿ ಅಭಿಯಾನ ಮಂಗಳೂರಿನ ಕುಲಶೇಖರದ ಅನಿತಾ ಶೆಣೈ ಅವರ ನಿವಾಸದಲ್ಲಿ  ಜರುಗಿತು. ಕನ್ನಡ ಭವನ ಸ್ಥಾಪಕ ಸಂಚಾಲಕ ವಾಮನ ರಾವ್ ಬೇಕಲ್ ಮತ್ತು ಸಂಧ್ಯಾ ರಾಣಿ ಟೀಚರ್  ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾಹಿತಿ ಮತ್ತು ಸಾಹಿತ್ಯ ಪರಿಚಾರಕ ಡಾ ಕೊಳ್ಚಪ್ಪೆ ಗೋವಿಂದ ಭಟ್ ಅಧ್ಯಕ್ಷತೆ ವಹಿಸಿದ್ದರು.  

ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕರಾದ ಜಯಾನಂದ ಪೆರಾಜೆ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಮನೆ ಮನೆ -ಕನ್ನಡ ಜಾಗೃತಿ ಅಭಿಯಾನದ ಅಂಗವಾಗಿ ದ.ಕ  ಘಟಕದ  ಅಧ್ಯಕ್ಷ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಅವರಿಗೆ ಕನ್ನಡ ಧ್ವಜವನ್ನು ನೀಡಿ ಅಭಿಯಾನಕ್ಕೆ ಶುಭ ಹಾರೈಸಿದರು.

ಕನ್ನಡ ಪ್ರಜ್ಞೆ, ಕನ್ನಡ ನೆಲ, ಜಲ, ಭಾಷೆಯ ಬಗ್ಗೆ ಆತ್ಮಅಭಿಮಾನ ಮೋಡಿಸುವ ನಿಟ್ಟಿನಲ್ಲಿ ಕನ್ನಡ ಕಾರ್ಯಕ್ರಮಗಳನ್ನು ತಳಮಟ್ಟದಲ್ಲಿ ಸಂಘಟಿಸಿ ಕನ್ನಡ ಪ್ರಜ್ಞೆ ಮೂಡಿಸಲು ಸಂಘಟನೆ ಅಹರ್ನಿಷಿ ದುಡಿಯಲಿದೆ, ಎಂದು ಕಾರ್ಯಕ್ರಮ ದ ಅಧ್ಯಕ್ಷ ಭಾಷಣದಲ್ಲಿ ಅಧ್ಯಕ್ಷ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಹೇಳಿದರು.   ಮುಖ್ಯ ಅತಿಥಿಯಾಗಿ ಕಥಾಬಿಂದು ಪ್ರಕಾಶಕ ಪಿ. ವಿ. ಪ್ರದೀಪ್ ಕುಮಾರ್, ಕನ್ನಡ ಭವನ ದ. ಕ. ಜಿಲ್ಲಾ ಕಾರ್ಯಧ್ಯಕ್ಷ ಉಮೇಶ್ ರಾವ್ ಕುಂಬ್ಳೆ, ಸಾಹಿತಿ ಸತ್ಯವತಿ ಭಟ್ ಕೊಳಚಪ್ಪು, ನಿವೃತ್ತ ಆಕಾಶವಾಣಿ ನಿರ್ದೇಶಕ ಮತ್ತು ಸಾಹಿತಿ ಡಾ. ಶಿವಾನಂದ ಬೇಕಲ್ ಉಪಸ್ಥಿತರಿದ್ದರು.  ಈ ಸಂದರ್ಭ  ಪ್ರಯೋಜಕರಾದ ಕನ್ನಡ ಚು. ಸಾ. ಪ. ಮಂಗಳೂರು ವಲಯ ಸಂಘಟನಾ ಕಾರ್ಯದರ್ಶಿ ಕವಯತ್ರಿ ಅನಿತಾ ಶೆಣೈ ಇವರಿಗೆ ಕನ್ನಡ ಭವನದ ಪ್ರತಿಷ್ಠಿತ ರಾಜ್ಯಾಂತರ ಪ್ರಶಸ್ತಿ "ಕನ್ನಡ ಪಯಸ್ವಿನಿ ಪ್ರಶಸ್ತಿ 2025"ನ್ನು ಡಾ. ವಾಮನ್ ರಾವ್ ಬೇಕಲ್ ಪ್ರದಾನ ಮಾಡಿದರು. ನಂತರ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ರಾಜ್ಯ ಸಂಚಾಲಕಿ ಡಾ. ಶಾಂತ ಪುತ್ತೂರು ವಹಿಸಿದರು. ಕವಿಗಳಾದ ಅಪೂರ್ವ ಕಾರಂತ್, ಜಯಾನಂದ ಪೆರಾಜೆ, ಕಸ್ತೂರಿ ಜಯರಾಮ್, ಶ್ರೀದೇವಿ ಭಂಡಾರಿ, ಗಾಯತ್ರಿ ಮನೋಹರ, ಪಿವಿ ಪ್ರದೀಪ್ ಕುಮಾರ್, ಅನಿತಾ ಶೆಣೈ,ಡಾ ಕೊಳ್ಚಪ್ಪೆ ಗೋವಿಂದ ಭಟ್, ಆರ್ ಎಂ ಗ್ರೊಗೇರಿ, ಪ್ರತಿಭಾ ಸಾಲಿಯಾನ್ ಸ್ವ ರಚಿತ ಕವನಗಳನ್ನು ವಾಚಿಸಿದರು. ರೇಖಾ ಸುದೇಶ್ ಮತ್ತು ಅಪೂರ್ವ ಕಾರಂತ ಕಾರ್ಯಕ್ರಮ ನಿರ್ವಹಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries