ಮಂಜೇಶ್ವರ: ವರ್ಕಾಡಿ ಪಾವೂರು ಪೊಯ್ಯೇ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಆಡಳಿತ ಸಮಿತಿಯ ಮಹಾಸಭೆ ಸಮಿತಿ ಅಧ್ಯಕ್ಷರಾದ ನಾಗೇಶ ಪೂಜಾರಿ ಮುಚಿಲ್ಮೆ ಅವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರದ ವಠಾರದಲ್ಲಿ ನಡೆಯಿತು.
ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಮನೋಹರ್ ಶೆಟ್ಟಿ ಕೆದುಂಬಾಡಿ ಅಧ್ಯಕ್ಷ, ಭುಜಂಗ ಶಿಂತಾಜೆ, ಚಂದ್ರಹಾಸ ಪೂಜಾರಿ ಮುಡಿಮಾರು ಉಪಾಧ್ಯಕ್ಷರು, ನಾಗೇಶ್ ಪೂಜಾರಿ ಮುಚ್ಚಿಲ್ಮೆ ಪ್ರಧಾನ ಕಾರ್ಯದರ್ಶಿ, ರಾಜೇಶ್ ಕಾಣದ ಕಟ್ಟ, ವಿಶ್ವನಾಥ ಶೆಟ್ಟಿ ಕೋರಿಮೊಗರು ಜೊತೆ ಕಾರ್ಯದರ್ಶಿಗಳು, ಭೋಜ ಮಾಸ್ಟರ್ ಬಲ್ಲೂರು ಕೋಶಾಧಿಕಾರಿ, ಬಿ ತ್ಯಾಂಪಣ್ಣರೈ ಪಾವೂರು ಹಾಗೂ ವಿನೋದ್ ಕುಮಾರ್ ಲೆಕ್ಕ ಪರಿಶೋಧಕರು ಹಾಗೂ ವಸಂತ ರಂಜೆಪಡ್ಪು, ಶಿವರಾಮ್ ಶೆಟ್ಟಿ ಮುಗೇರ್ ಗುತ್ತು ,ಜಯಪ್ರಕಾಶ್ ಅಡ್ಯಂತಾಯ ಕಾಪು ,ನಾರಾಯಣಶೆಟ್ಟಿ ಬಜಾಲ್, ರವಿಮುಡಿಮಾರು, ಸುಧಾಕರ ಶೆಟ್ಟಿ ಪಾವೂರು, ರಾಜಕುಮಾರ್ ಶೆಟ್ಟಿ ಮುಟ್ಲ, ಬೂಬ ಡಿ ಪೆÇಯೈ, ಶೇಖರ ಕಾನದ ಕಟ್ಟ, ಸದಾಶಿವ ಬಂಜನ್ ಪಾದೆ, ದಯಾನಂದ ಸಾಲಿಯಾನ್ ಕೊಪ್ಪಳ ,ಪದ್ಮ ಕಲ್ಲಾಪು, ಪುಷ್ಪರಾಜ ಶೆಟ್ಟಿ ಪಾವೂರು ಗುತ್ತು, ನವಿರಾಜ್ ಮುಡಿಮಾರು ,ಮಾಧವ ಪೂಜಾರಿ ಕುದುಕೋರಿ ,ಉದಯ ಬೋಳಕಡ, ದಯಾನಂದ ಪೂಜಾರಿ ನೆಕ್ಕಲ, ಪುನೀತ್ ರೈ ಪಾವೂರು, ಗೋಪಾಲ ಅಂಚನ್ ನೆಕ್ಕಲ, ಅಶೋಕ್ ತಚ್ಚಿರೆ, ಹರ್ಷಿತ್ ನೆಕ್ಕಲ ಅವರನ್ನು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿ ರಾಜೇಶ್ ಕಾನದಕಟ್ಟ ಸ್ವಾಗತಿಸಿ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. ಭುಜಂಗ ಶಿಂತಾಜೆ ಧನ್ಯವಾದಗಳು ಅರ್ಪಿಸಿದರು.


