HEALTH TIPS

ಡಾ. ಐ.ಜಿ. ಭಟ್ಟರ ಜೀವನಾನುಭವ ಕಥನ 'ವಿಜಯಪಥ' ಅನಾವರಣ

ಮಂಜೇಶ್ವರ: ಜನಪ್ರಿಯ ವೈದ್ಯ, ಜನಹಿತ ಚಿಂತಕ ಡಾ. ಈರೋಡಿ ಗಣಪತಿ ಭಟ್ ಅವರ ಜೀವನ ಅನುಭವ ಕಥನ 'ವಿಜಯಪಥ'ದ ಬಿಡುಗಡೆ ಸಮಾರಂಭ ಬಲಿಪಗುಳಿ  ಶಬರಿಗಿರಿ'ಯಲ್ಲಿ ಭಾನುವಾರ ಜರಗಿತು. ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ವೇದಮೂರ್ತಿ ಪರಕ್ಕಜೆ ಗಣಪತಿ ಭಟ್ ಕೃತಿ ಬಿಡುಗಡೆಗೊಳಿಸಿದರು. ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ 'ವಿಜಯಪಥ'ವನ್ನು ಪರಿಚಯಿಸಿದರು.

ವಿದ್ವಾಂಸ ವೇದಮೂರ್ತಿ ಬೊಳಂತಕೋಡಿ ರಾಮ ಭಟ್ ಶುಭಾಶಂಸನೆ ಗೈದರು. ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕ ರವಿಶಂಕರ ಹೊಳ್ಳ, ನಿವೃತ್ತ ಮುಖ್ಯೋಪಾಧ್ಯಾಯಿನಿ ಅನಸೂಯಾದೇವಿ, ನಿವೃತ್ತ ಪ್ರಾಂಶುಪಾಲ ಮಜಿ ನಾರಾಯಣ ಭಟ್, ಮಂಗಳೂರಿನ ಆಕೃತಿ ಆಶಯ ಪ್ರಕಾಶನದ ಸಂಚಾಲಕ ಕಲ್ಲೂರು ನಾಗೇಶ, ಕಾಸರಗೋಡಿನ ಆಶೀರ್ವಾದ ಪ್ರಕಾಶನ ಸಂಚಾಲಕ ಪ್ರಣವ ಎ., ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಲೇಖಕ ಡಾ. ಐ. ಜಿ. ಭಟ್ ಮತ್ತು ಪತ್ನಿ ಡಾ. ಚಂದ್ರಮತಿ ಕೃತಿ ರಚನೆಯ ಹಿನ್ನೆಲೆಯನ್ನು ಪ್ರಸ್ತುತಪಡಿಸಿ ಕೃತಜ್ಞತೆ ಸಲ್ಲಿಸಿದರು. 

ದೀಪ ಪ್ರಜ್ವಲನೆಯ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ 'ವಿಜಯಪಥ'ದ ನಿರೂಪಕಿ ಉಷಾ ರವಿಶಂಕರ್ ಪ್ರಾರ್ಥನೆ ಹಾಡಿದರು. ಉಮೇಶ್ ಭಟ್ ಕೆ.ವಿ. ಸ್ವಾಗತಿಸಿ, ರವಿಶಂಕರ್ ಐ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ಶ್ಯಾಮ್ ಕುಮಾರ್ ಎನ್.ಕೆ. ಕಾರ್ಯಕ್ರಮ ನಿರೂಪಿಸಿದರು. ಡಾ. ಶಶಿಕಲಾ ಐ. ವಂದಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಿಯೊಂದಿಗೆ ಪ್ರಕೃತಿ ಪರಿಸರ ಸಂರಕ್ಷಣೆಯ ಪ್ರತೀಕವಾಗಿ ಸಸಿ ವಿತರಿಸಲಾಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries