ನವದೆಹಲಿ: ಕೆನಡಾದಲ್ಲಿ ಇದೇ ತಿಂಗಳಿನಲ್ಲಿ ನಡೆಯುವ 'ಜಿ7' ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
'ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರು ಕರೆ ಮಾಡಿ, ಶೃಂಗಸಭೆಗೆ ಆಹ್ವಾನ ನೀಡಿದ್ದಾರೆ. ಹೊಸದಾಗಿ ಆಯ್ಕೆಯಾಗಿರುವ ಕಾರ್ನಿ ಅವರೊಂದಿಗೆ ಸಭೆ ನಡೆಸಲೂ ನಾನು ಉತ್ಸುಕನಾಗಿದ್ದೇನೆ' ಎಂದು ಪ್ರಧಾನಿ ತಿಳಿಸಿದ್ದಾರೆ.
'ಭಾರತ ಮತ್ತು ಕೆನಡಾ ಪ್ರಜಾಪ್ರಭುತ್ವ ದೇಶಗಳಾಗಿದ್ದು, ಎರಡೂ ದೇಶಗಳ ಜನರ ನಡುವೆ ಆತ್ಮೀಯವಾದ ಸಂಬಂಧವಿದೆ. ಉಭಯ ದೇಶಗಳು ಇನ್ನಷ್ಟು ಚೈತನ್ಯದಿಂದ ಜತೆಯಾಗಿ ಕೆಲಸ ಮಾಡಲಿವೆ' ಎಂದು ಅವರು ಹೇಳಿದ್ದಾರೆ.
ಕೆನಡಾದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಜಯ ಗಳಿಸಿದ ಕಾರ್ನಿ ಅವರಿಗೆ ಮೋದಿ ಅವರು ಇದೇ ವೇಳೆ ಅಭಿನಂದನೆ ಸಲ್ಲಿಸಿದ್ದಾರೆ.




