HEALTH TIPS

Ahmedabad Plane Crash: ಸಹ ಪೈಲಟ್ ಕ್ಲೈವ್ ಕುಂದರ್ ಮೃತದೇಹ ಸ್ವಗೃಹಕ್ಕೆ

ಮುಂಬೈ: ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್‌ ಇಂಡಿಯಾ ವಿಮಾನ ಪತನದ ದುರಂತದಲ್ಲಿ ಮೃತಪಟ್ಟ ಸಹ ಪೈಲಟ್‌ ಕ್ಲೈವ್ ಕುಂದರ್ ಅವರ ಮೃತದೇಹವನ್ನು ಮುಂಬೈನಲ್ಲಿನ ಸ್ವಗೃಹಕ್ಕೆ ಗುರುವಾರ ತರಲಾಗಿದೆ.

ಕುಂದರ್‌ ಅವರು ಮುಂಬೈನ ಗುರ್‌ಗಾಂವ್‌ನಲ್ಲಿ ಪೋಷಕರು ಮತ್ತು ಸಹೋದರಿಯೊಂದಿಗೆ ವಾಸಿಸುತ್ತಿದ್ದರು.

ಗುರುವಾರ ಮಧ್ಯಾಹ್ನ 1 ಗಂಟೆಯವರೆಗೆ ಮೃತದೇಹವನ್ನು ದರ್ಶನಕ್ಕೆ ಇರಿಸಲಾಗಿದ್ದು, ಬಳಿಕ ಸೆವ್ರಿ ಕ್ರಿಶ್ಚಿಯನ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಜೂನ್‌ 12 ರಂದು 242 ಪ್ರಯಾಣಿಕರನ್ನು ಹೊತ್ತ ಏರ್‌ ಇಂಡಿಯಾ ಎಐ -171 ವಿಮಾನ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿತ್ತು. ಆದರೆ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ ಮೇಲೆ ವಿಮಾನ ಪತನವಾಗಿ ಒಬ್ಬ ಪ್ರಯಾಣಿಕನ ಹೊರತಾಗಿ ಪೈಲಟ್‌ ಸೇರಿ ಎಲ್ಲರೂ ಮೃತಪಟ್ಟಿದ್ದರು. ಈ ವಿಮಾನದಲ್ಲಿ ಕುಂದರ್ ಸಹ ಪೈಲಟ್‌ ಆಗಿದ್ದರು. ಇವರು 1,100 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries