ಉಪ್ಪಳ: ಕುರುಡಪದವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಮಾದಕದ್ರವ್ಯ ವಿರೋಧಿ ದಿನಾಚರಣೆ ಗುರುವಾರ ವಿವಿಧ ಕಾರ್ಯಕ್ರಮಗಳೊಂದಿಗೆ
ಆಚರಿಸಲಾಯಿತು. ಶಾಲಾ ಅಸೆಂಬ್ಲಿಯಲ್ಲಿ ಶಾಲಾ ಹಿರಿಯ ಶಿಕ್ಷಕ ಗಿರೀಶ್ ಮಾಸ್ತರ್ ವಿಶ್ವ ಮಾದಕದ್ರವ್ಯ ವಿರೋಧಿ ದಿನಾಚರಣೆಯ ಮಹತ್ವವನ್ನು ಮಕ್ಕಳಿಗೆ ತಿಳಿ ಹೇಳಿದರು. ಮಾದಕ ದ್ರವ್ಯ ವಿರೋಧಿ ಪ್ರತಿಜ್ಞೆಯನ್ನು ಶಾಲಾ ಸಂರಕ್ಷಣಾ ಸಮಿತಿ ಸಂಚಾಲಕರೂ, ಶಿಕ್ಷಕರೂ ಆದ ಪ್ರಶಾಂತ್ ಕುಮಾರ್ ಮಾಸ್ತರ್ ಮಕ್ಕಳಿಗೆ ಬೋಧಿಸಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದ ರಾಜ್ಯ ಮಟ್ಟದ ಮಾದಕದ್ರವ್ಯ ವಿರೋಧಿ ದಿನಾಚರಣೆಯನ್ನು ವಿಕ್ಟರ್ಸ ಚಾನೆಲ್ ಮೂಲಕ ಮಕ್ಕಳಿಗೆ ತೋರಿಸಲಾಯಿತು.
ಝುಂಬಾ ಡ್ಯಾನ್ಸ್ ನ್ನು ಹಿಂದಿ ಶಿಕ್ಷಕ ಸತೀಶ್ ಸುವರ್ಣ ನೇತೃತ್ವದಲ್ಲಿ ಮಕ್ಕಳು ಶಾಲಾ ಸಭಾಂಗಣದಲ್ಲಿ ಮಾಡಿದರು. ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಪೋಸ್ಟರ್ ಸ್ಪರ್ಧೆ ಏರ್ಪಡಿಸಲಾಯಿತು. ಬಳಿಕ ಮಾದಕದ್ರವ್ಯ ವಿರೋಧಿ ರ್ಯಾಲಿ ನಡೆಸಲಾಯಿತು. ಹಿರಿಯ ಶಿಕ್ಷಕ ಗಿರೀಶ್ ನೇತೃತ್ವ ನೀಡಿದರು. ಸತೀಶ್ ಸುವರ್ಣ, ಅಬ್ದು ರಹೀಂ, ಪ್ರಶಾಂತ್ ಕುಮಾರ್ , ಯಶಸ್, ಶಿಕ್ಷಕಿಯರಾದ ಹರ್ಷಿತಾ, ಪ್ರಮೀಳಾ, ಅರ್ಚನಾ, ದಿಶಾ ಕೂಟಾಲಿಯನ್, ಮೋಹಿನಿ ರ್ಯಾಲಿಯಲ್ಲಿ ಭಾಗಿಗಳಾದರು.




.jpg)
.jpg)
