ಉಪ್ಪಳ: ಕುರುಡಪದವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಚನಾ ಸಪ್ತಾಹದ ಸಮಾರೋಪ ಸಮಾರಂಭ ಮತ್ತು 2025-26 ಶೈಕ್ಷಣಿಕ ಸಾಲಿನ ವಿವಿಧ ಕ್ಲಬ್ ಗಳ ಔಪಚಾರಿಕ ಉದ್ಘಾಟನೆ ಜರುಗಿತು. ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ನಮ್ಮ ಶಾಲಾ ನಿವೃತ್ತ ಶಿಕ್ಷಕಿ ಉದಯಶಂಕರಿಯವರು ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಿ, ಮಾತನಾಡಿ ಓದು ನಮ್ಮ ಜೀವನಕ್ಕೆ ಮಹತ್ವದಾಗಿದ್ದು, ಅದನ್ನು ನಾವು ಹವ್ಯವಾಗಿರಸಿಕೊಳ್ಳಬೇಕು ಹಾಗೂ ವಿವಿಧ ಕ್ಲಬ್ ಚಟುವಟಿಕೆಗಳು ಇದಕ್ಕೆ ಪ್ರೇರಣೆಯಾಗಲಿ ಎಂದರು.
ಬಳಿಕ ಹಿಂದಿ ಶಿಕ್ಷಕರೂ, ಶಾಲಾ ವಿದ್ಯಾರಂಗ ಕ್ಲಬ್ ನ ಕನ್ವೀನರ್ ಸತೀಶ್ ಸುವರ್ಣ ಅವರು ಮಕ್ಕಳಿಗೆ ವಿವಿಧ ಕ್ಲಬ್ ಗಳ ಸಂಕ್ಷಿಪ್ತ ಪರಿಚಯ ನೀಡಿದರು. ವಿಜ್ಞಾನ ಕ್ಲಬ್ ನ ಕನ್ವೀನರ್ ಅರ್ಚನಾ ಟೀಚರ್ ಪ್ರಯೋಗದ ಮೂಲಕ ವಿಜ್ಞಾನ ಕ್ಲಬ್ ಚಟುವಟಿಕೆಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡುವಂತೆ ಮಾಡಿದರು. ಪ್ರಶಾಂತ್ ಮಾಸ್ತರ್ ಗಣಿತ ಫಝಲ್ ನ್ನು , ಗಿರೀಶ್ ಮಾಸ್ತರ್ ಸಂಖ್ಯಾ ಸಂಬಂಧದ ಪ್ರಶ್ನೆಯನ್ನು ಮಕ್ಕಳ ಮುಂದಿಡುವುರೊಂದಿಗೆ ಮಕ್ಕಳ ಚಿಂತನೆಗೆ ಅವಕಾಶ ಮಾಡಿಕೊಟ್ಟರು. ಉರ್ದು ಭಾಷಾ ಚಟುವಟಿಕೆಯನ್ನು 7ನೇ ತರಗತಿ ವಿದ್ಯಾರ್ಥಿನಿಗಳಾದ ರಿಝ ಮತ್ತು ಲುಹ ಮಕ್ಕಳ ಮುಂದೆ ಪ್ರಸ್ತುತ ಪಡಿಸಿದರು. ವಾಚನಾ ಸಪ್ತಾಹ ಭಾಗವಾಗಿ ಹಿರಿಯ ಪ್ರಾಥಮಿಕ ಮಕ್ಕಳು ಬರೆದ ಆಸ್ವಾದನಾ ಬರವಣಿಗೆಯ ಹಸ್ತ ಪ್ರತಿಯನ್ನು ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿದ್ದ ನಿವೃತ್ತ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ಟೀಚರ್ ಬಿಡುಗಡೆಗೊಳಿಸಿದರು.
ಬಳಿಕ ವಾಚನ ಸಪ್ತಾಹದ ಅಂಗವಾಗಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮಕ್ಕಳಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಉದ್ಘಾಟಕರಾದ ನಿವೃತ್ತ ಶಿಕ್ಷಕಿ ಉದಯಶಂಕರಿಯವರು ಮಕ್ಕಳಿಗೆ ಅಭಿನಯ ಗೀತೆಯೊಂದನ್ನು ಹೇಳಿಕೊಟ್ಟರು. ಹಿರಿಯ ಶಿಕ್ಷಕ ಗಿರೀಶ್ ಸ್ವಾಗತಿಸಿ, ಉರ್ದು ಭಾಷಾ ಶಿಕ್ಷಕಿ ಜಿಶಾ ಟೀಚರ್ ವಂದಿಸಿದರು. ಶಿಕ್ಷಕ ಪ್ರಶಾಂತ್ ಕುಮಾರ್ ಅಮ್ಮೇರಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕ, ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.






