ಬದಿಯಡ್ಕ: ಕಿಳಿಂಗಾರು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ 2025-26 ನೇ ಶೈಕ್ಷಣಿಕ ವರ್ಷದ ಪ್ರಿ-ಪ್ರೈಮರಿ ಹಾಗೂ ಶಾಲಾ ಪ್ರವೇಶೋತ್ಸವ ಸೋಮವಾರ ನಡೆಯಿತು. ಶಾಲಾ ವ್ಯವಸ್ಥಾಪಕ, ಕೊಡುಗೈದಾನಿ ಸಾಯಿರಾಂ ಕೆ.ಎನ್ ಕೃಷ್ಣ ಭಟ್ ಉದ್ಘಾಟಿಸಿದರು. ಪಿ.ಟಿ.ಎ ಅಧ್ಯಕ್ಷ ವಿಷ್ಣು ಪ್ರಕಾಶ್ ಪೆರ್ವ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್, ಶಿವ ಪ್ರಸಾದ್ ಹೊಸಮನೆ, ಮಾತೃ ಸಂಘದ ಅಧ್ಯಕ್ಷೆ ದಿವ್ಯಲಕ್ಷ್ಮಿ ಉಪಸ್ಥಿತರಿದ್ದರು. ಈ ವರ್ಷದ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳನ್ನು ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು. ಶಾಲೆಯ ಪೂರ್ವ ವಿದ್ಯಾರ್ಥಿ ಶ್ರೀನಿಧಿ ನಿಡುಗಳ ಅವರ ಸಂಸ್ಥೆ ಈ ಶೈಕ್ಷಣಿಕ ವರ್ಷ ಶಾಲೆಯ 1ನೇ ತರಗತಿಯಿಂದ 4 ನೇ ತರಗತಿಯ ಮಕ್ಕಳಿಗೆ ಬ್ಯಾಗ್, ಕಿಟ್ ಹಾಗೂ ನೋಟು ಪುಸ್ತಕಗಳನ್ನು ವಿತರಿಸಿದರು. ಕಲಿಕಾ ಕಿಟ್, ಬ್ಯಾಗ್, ಸ್ಲೇಟ್, ಸಮವಸ್ತ್ರ, ಸಿಹಿತಿಂಡಿಗಳನ್ನು ವಿತರಿಸಲಾಯಿತು. ಮುಖ್ಯೋಪಾಧ್ಯಾಯಿನಿ ಶ್ರೀವಿದ್ಯಾ ಎ. ಸ್ವಾಗತಿಸಿ, ಅಧ್ಯಾಪಿಕೆ ಸಹನಾ ಯಂ. ವಂದಿಸಿದರು.






