ಕಾಸರಗೊಡು: ನಗರದ ಹಳೇ ಬಸ್‍ನಿಲ್ದಾಣ ವಠಾರದ ಸ್ಟೇಟ್ ಹೋಟೆಲ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಬಟ್ಟೆ ಅಂಗಡಿಗೆ ಬೆಂಕಿ ತಗುಲಿದ ಪರಿಣಾಮ ಅಪಾರ ಹಾನಿ ಸಂಭವಿಸಿದೆ. ಚೆರ್ಕಳ ನಿವಾಸಿ ನಿಜಾಮ್ ಎಂಬವರ ಮಾಲಿಕತ್ವದ ಬುರ್ಖಾ ಅಂಗಡಿ ಸುಟ್ಟು ಭಸ್ಮವಾಗಿದೆ.
ಸೋಮವಾರ ಬೆಳಗ್ಗೆ 5.30ರ ವೇಳೆಗೆ ಅಂಗಡಿಯೊಳಗಿಂದ ಹೊಗೆ ಹೊರಬರುತ್ತಿರುವುದನ್ನು ಕಂಡು ಅಗ್ನಿಶಾಮಕ ದಳಕ್ಕೆ ನೀಡಿದ ಮಾಹಿತಿಯನ್ವಯ ಉಪ್ಪಳ, ಕಾಸರಗೋಡು ಹಾಗೂ ಕುತ್ತಿಕೋಲಿನಿಂದ ಅಗ್ನಿಶಾಮಕ ವಾಹನಗಳು ತಲುಪಿ ಬೆಂಕಿಶಮನಗೊಳಿಸಿದ್ದರೂ, ಅದಾಗಲೇ ಒಳಭಾಗ ಸಂಪೂರ್ಣ ಸುಟ್ಟು ಹಾನಿಗೀಡಾಗಿತ್ತು. ಅಗ್ನಿಶಾಮಕ ದಳದ ಸಕಾಲಿಕ ಕಾರ್ಯಾಚರಣೆಯಿಂದ ನಗರದ ಇತರ ವ್ಯಾಪಾರಿ ಮಳಿಗೆಗಳಿಗೆ ಬೆಂಕಿ ವ್ಯಾಪಿಸುವುದು ತಪ್ಪಿತ್ತು. ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಬೆಂಕಿ ದುರಂತಕ್ಕೆ ಕಾರಣವೆಂದು ಸಂಶಯಿಸಲಾಗಿದೆ. 25ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.






