ಕಾಸರಗೋಡು: ಉಸಿರಾಟದ ಸಮಸ್ಯೆಗೆ ಸಂಬಂಧಿಸಿ ಆಸ್ಪತ್ರೆಗೆ ದಾಖಲಾಗಿದ್ದ ತಾಯಿಯ ಆರೈಕೆಗಾಗಿ ತಲುಪಿದ್ದ ಪುತ್ರಿ, ಉಸಿರಾಟದ ಅಸೌಖ್ಯ ಕಾಣಿಸಿಕೊಂಡು ಮೃತಪಟ್ಟ ಘಟನೆ ಕಾಞಂಗಾಡಿನಲ್ಲಿ ನಡೆದಿದೆ. ಚೆರ್ವತ್ತೂರು ಬಸ್ ನಿಲ್ದಾಣ ಸನಿಹ ಮಿಲ್ಮಾ ಬೂತ್ ನಡೆಸುತ್ತಿರುವ, ಞËಣಂಗೈ ನಿವಾಸಿ ಶಶಿ ಕುಮಾರ್ ಅವರ ಪುತ್ರಿ ಎಸ್. ಅನಿತಾ(48)ಮೃತಪಟ್ಟ ಮಹಿಳೆ.
ಅನಿತಾ ಅವರ ತಾಯಿ ಕಲ್ಯಾಣಿ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾವುಂಗಾಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರನ್ನು ನೋಡಿಕೊಳ್ಳಲು ಆಗಮಿಸಿದ್ದ ಪುತ್ರಿ ಅನಿತಾ ಅವರಿಗೆ ಸೋಮವಾರ ನಸುಕಿಗೆ ಉಸಿರಾಟದ ಸಮಸ್ಯೆ ತಲೆದೋರಿದ್ದು, ಜತೆಗೆ ಕೆಮ್ಮು ಕಾಣಿಸಿಕೊಂಡಿತ್ತು. ತಕ್ಷಣ ಇವರಿಗೆ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿರಲಿಲ್ಲ.




