ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮೀಯಪದವು ಪೆಟ್ರೋಲ್ ಪಂಪ್ ಉದ್ಯೋಗಿ ಯುವಕ ಮನೆ ಕೊಠಡಿಯಲ್ಲಿ ಆತ್ಮಹತ್ಯೆಗ್ಯೆದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೊಡ್ಲಮೊಗರು ನಿವಾಸಿ ಶೇಖರ್ ಮತ್ತು ಲತಾ ದಂಪತಿಯ ಪುತ್ರ ಭರತ್‌ರಾಜ್ (24) ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಸಹೋದರಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮಲಗುವ ಕೋಣೆಯಿಂದ ಭರತ್‌ರಾಜ್ ಅವರ ಧ್ವನಿ ಕೇಳಿ ಬಂದಿದ್ದು ಧಾವಿಸಿ ನೋಡಿದಾಗ ಫ್ಯಾನ್‌ನ ಕೊಕ್ಕೆಯಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ನೆರೆಹೊರೆಯವರ ಸಹಾಯದಿಂದ, ಅವರನ್ನು ತಕ್ಷಣ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಬದುಕುಳಿಸಲಾಗಲಿಲ್ಲ. ಮೃತದೇಹ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೊಯ್ದು ಇಂದು ಮಹಜರು ನಡೆಸಲಾಗುವುದು. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಮೃತನು ಸಹೋದರ ಅಭಿಷೇಕ್, ಸಾಕ್ಷಿ ಅವರನ್ನಗಲಿದ್ದಾನೆ.




