ಕಾಸರಗೋಡು: ಬಿರುಸಿನ ಮಳೆಗೆ ಕಾಸರಗೋಡು ಜಿಲ್ಲೆಯಲ್ಲಿ ವ್ಯಾಪಕ ಹಾನಿಯುಂಟಾಗಿದೆ. ಕೇಳುಗುಡ್ಡೆ ನಿವಾಸಿ ಸಿ.ಕೆ ಮಹಮ್ಮದ್ ಎಂಬವರ ಮನೆ ಆವರಣಗೋಡೆ ಕುಸಿದು ಬಿದ್ದು ಹಾನಿಗೀಡಾಗಿದೆ. ಮಧೂರು ದೇವಾಲಯದ ರಾಜಗೋಪುರ ಎದುರಿನ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು ಸಣ್ಣ ವಾಹನಗಳ ಸಂಚಾರಕ್ಕೆ ತಡೆಯುಂಟಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಚೆರ್ಕಳ ಸನಿಹ ತಡೆಗೋಡೆ ಕುಸಿದು ರಸ್ತೆಗೆ ಹಾನಿಯುಂಟಾಗಿದೆ. ಭಾರಿ ಗಾತ್ರದ ಜೆಸಿಬಿ ಬಳಸಿ ರಸ್ತೆಗೆ ಬಿದ್ದ ಮಣ್ಣು ತೆರವುಗೊಳಿಸುವ ಕಾರ್ಯ ಮುಂದುವರಿದಿದೆ.
ಮಧೂರು ಮಧುವಾಹಿನಿ ಹೊಳೆ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಪಟ್ಲ ಬಯಲು ಪ್ರದೇಶದ ಹಲವಾರು ಮನೆಗಳಿಗೆ ನೆರೆನೀರು ನುಗ್ಗಿದೆ. ತಗ್ಗು ಪ್ರದೇಶದಲ್ಲಿರುವ ಜನತೆಯನ್ನು ರಕ್ಷಣಾ ದಳ ಸಿಬ್ಬಂದಿ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿತು. ಕಾಸರಗೋಡು ನಗರ, ಕೇಳುಗುಡ್ಡೆ, ಕೊರುವೈಲ್ ದೇವಸ್ಥಾನ ರಸ್ತೆ ಸೇರಿದಂತೆ ನಾನಾ ಕಡೆ ರಸ್ತೆಯಲ್ಲಿ ನೀರುತುಂಬಿಕೊಂಡು ವಾಹನ ಸಂಚಾರಕ್ಕೆ ಅಡಚಣೆಯುಂಟಯಿತು.
PHOTOS: ಮಧೂರು ದೇವಸ್ಥಾನ ಎದುರಿನ ರಸ್ತೆಯಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು, ಸಣ್ಣ ವಆಹನಗಳ ಸಂಚಾರಕ್ಕೆ ಅಡಚಣೆಯುಂಟಯಿತು.
ಮಧೂರು ಪಟ್ಲ ಪ್ರದೇಶದಲ್ಲಿ ನೆರೆನೀರು ತುಂಬಿಕೊಂಡಿರುವ ತಗ್ಗು ಪ್ರದೇಶದಿದ ಜನರನ್ನು ಸಉರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಯಿತು.
: ಕೇಳುಗುಡ್ಡೆ ನಿವಾಸಿ ಸಿ.ಕೆ ಮಹಮ್ಮದ್ ಎಂಬವರ ಮನೆ ಆವರಣಗೋಡೆ ಕುಸಿದು ಬಿದ್ದು ಹಾಣಿಯುಂಟಗಿದೆ.





