ಕುಂಬಳೆ : ಬಿರುಸಿನ ಮಳೆಗೆ ತೋಡಿಗೆ ಬಿದ್ದು, ಕಾಸರಗೋಡು ಜಿಲ್ಲೆಯಲ್ಲಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಕುಂಬಳೆ ಸನಿಹದ ಬಂದ್ಯೋಡು ಕೊಕ್ಕೆಚ್ಚಾಲ್ ನಿವಾಸಿ ಸಾದತ್ ಅವರ ಪುತ್ರ ಸುಲ್ತಾನ್(8)ಮೃತಪಟ್ಟ ಬಾಲಕ. ಸೋಮವಾರ ಮನೆ ಸನಿಹ ಆಟವಾಡುತ್ತಿದ್ದ ಬಾಲಕ ನಾಪ್ತೆಯಾಗಿದ್ದು, ಮನೆ ಸನಿಹದ ತೋಡಿನಲ್ಲಿ ನೀರಿನ ಸಎಳೆತಕ್ಕೀಡಾಗಿರುವ ಸಂಶಯದಿಂದ ಅಗ್ನಿಶಾಮಕದಳ, ಪೊಲೀಸ್ ಹಾಗೂ ಸ್ಥಳೀಯರು ಹುಡುಕಾಟ ನಡೆಸಿದಾಗ ಮನೆಯಿಂದ 500ಮೀ. ದೂರದ ತೋಟಿನಲ್ಲಿ ನೀರಿನ ಸೆಳೆತಕ್ಕೆ ಸಿಲಕಿರುವುದು ಕಂಡು ಬಂದಿತ್ತು. ತಕ್ಷಣ ಬಾಲಕನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಬಾಲಕ ಉಪ್ಪಳ ನಯಾಬಜಾರಿನ ಖಾಸಗಿ ಶಾಲೆ ವಿದ್ಯಾರ್ಥಿಯಾಗಿದ್ದನು.

