ಕುಂಬಳೆ: ಕಾನ ಮಠದಲ್ಲಿ ಶ್ರೀಧೂಮಾವತೀ ದೈವದ ಭಂಡಾರ ಕೊಟ್ಟಗೆಯ ಮುಂಭಾಗದಲ್ಲಿ ಮೂಡ ಕೋಣಮ್ಮೆ ವೆಂಕಟರಮಣ ಭಟ್ಟರು ದಾನವಾಗಿ ನೀಡಿದ ಭೂಮಿಯಲ್ಲಿ ಶ್ರೀ ಸಂಸ್ಥಾನದವರ ಮೊಕ್ಕಾಂ ಮತ್ತು ಕಾನ ಮಠದ ಭಜಕರ ಉಪಯೋಗಕ್ಕಾಗಿ ಗುರುಭವನ ಸಹಿತವಾದ ಸಭಾಭವನದ ಕಾಮಗಾರಿ ಪ್ರಾರಂಭಕ್ಕೆ ಶಂಕುಸ್ಥಾಪನೆಗೆ ಜೂ. 04 ರಂದು ಬುಧವಾರ ನಡೆಯಲಿದೆ. ಬೆಳಿಗ್ಗೆ 08-05 ರಿಂದ 8-55 ರ ಮಿಥುನ ಲಗ್ನದಲ್ಲಿ ಕ್ಷೇತ್ರಾಚಾರ್ಯರಿಂದ ಶಂಕುಸ್ಥಾಪನೆ ನೆರವೇರಲಿದೆ. ಕಾರ್ಯಕ್ರಮದಲ್ಲಿ ಆಸ್ತಿಕ ಬಂಧುಗಳು ಭಾಗವಹಿಸಬೇಕೆಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.






