ಕುಂಬಳೆ: ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ 141ನೇ ಜನ್ಮ ದಿನಾಚರಣೆ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶಯದಲ್ಲಿ ಜೂನ್.4 ರಂದು ಸಂಜೆ 5ಕ್ಕೆ ಸೀತಾಂಗೋಳಿಯಲ್ಲಿರುವ ವಕೀಲ ಥಾಮಸ್ ಡಿ'ಸೋಜ ಅವರ ಕಛೇರಿ ಕಟ್ಟಡದಲ್ಲಿ ನಡೆಯುವುದು.
ವಕೀಲ, ಸಾಹಿತಿ ಥಾಮಸ್ ಡಿ'ಸೋಜ ನಾಲ್ವಡಿ ಕೃಷ್ಣರಾಜ ಒಡೆಯರ ಸಂಸ್ಮರಣೆ ಮಾಡುವರು. ಕ.ಸಾ.ಪ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸುವರು. ಕವಯತ್ರಿ ವಿದ್ಯಾವಾಣಿ ಮಠದಮೂಲೆ ಶುಭಾಶಂಸನೆ ನಡೆಸುವರು. ಕ.ಸಾ.ಪ ಗೌರವ ಕಾರ್ಯದರ್ಶಿಗಳಾದ ಶೇಖರ ಶೆಟ್ಟಿ ಬಾಯಾರು, ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಉಪಸ್ಥಿತರಿರುವರು.




