ಮುಳ್ಳೇರಿಯ: ಇಲ್ಲಿಯ ಕಯ್ಯಾರ ಕಿಞ್ಞಣ್ಣ ರೈ ಸ್ಮಾರಕ ಗ್ರಂಥಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನವೋದಯ ಪುರುಷ ಸ್ವ-ಸಹಾಯ ಸಂಘದ ಆಶ್ರಯದಲ್ಲಿ ಗುರುವಾರ ಪರಿಸರ ದಿನದಂದು ಗುಂಪಿನ ಸದಸ್ಯರಿಗೆ ಉತ್ತಮ ಗುಣಮಟ್ಟದ ಮಾವಿನ ಸಸಿಗಳನ್ನು ವಿತರಿಸಲಾಯಿತು. ವಿತರಣೆಯನ್ನು ಕಾರಡ್ಕ ಗ್ರಾ.ಪಂ. ಅಧ್ಯಕ್ಷ ಗೋಪಾಲಕೃಷ್ಣ ಭಟ್ ನೆರವೇರಿಸಿದರು. ಕೆ.ಕೆ. ರಂಜಿತ್ ಪರಿಸರ ದಿನಾಚರಣೆಯ ಪ್ರತಿಜ್ಞೆಯನ್ನು ಬೋಧಿಸಿದರು. ಸುಭಾಷ್ ಕೆ.ಎಂ. ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆ.ಕೆ. ಮೋಹನನ್, ಕೆ.ಗೋವಿಂದನ್ ಮತ್ತು ರಾಜೇಶ್ ಕುಮಾರ್ ಕೆ. ಮಾತನಾಡಿದರು.




.jpg)

