ಕಾಸರಗೋಡು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಪೋಲೀಸರು ಜಂಟಿಯಾಗಿ ಜಾರಿಗೆ ತಂದಿರುವ ಕೆ.ಇ.ಎಲ್.ಎಸ್.ಎಯ ಸಮಯಂ ಯೋಜನೆ ಜಿಲ್ಲೆಯಲ್ಲಿ ಆರಂಭವಾಗಿದೆ. ಸಮಯಂ ಎಂಬುದು ಪೋಲೀಸ್ ಠಾಣೆಗಳಿಂದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಿವಿಲ್ ಪ್ರಕರಣಗಳು ಸೇರಿದಂತೆ ವಿಶೇಷ ವರ್ಗದ ಪ್ರಕರಣಗಳನ್ನು ಉಲ್ಲೇಖಿಸುವ ಯೋಜನೆಯಾಗಿದೆ.
ಜಿಲ್ಲಾ ಪೋಲೀಸ್ ಮುಖ್ಯಸ್ಥ ವಿಜಯ ಭರತ್ ರೆಡ್ಡಿ ಐಪಿಎಸ್ ಈ ಯೋಜನೆಯನ್ನು ಜಿಲ್ಲಾ ಪೋಲೀಸ್ ಪ್ರಧಾನ ಕಚೇರಿಯಲ್ಲಿ ಉದ್ಘಾಟಿಸಿದರು. ಹೆಚ್ಚುವರಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಬಾಲಕೃಷ್ಣನ್ ನಾಯರ್ ಪಿ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ/ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ರುಕ್ಮಾ ಎಸ್ ರಾಜ್ ಮುಖ್ಯ ಅತಿಥಿಯಾಗಿ ಮಾತನಾಡಿದರು. ಡಿಎಲ್.ಎಸ್.ಎ. ವಿಭಾಗ ಅಧಿಕಾರಿ ಕೇಶವನ್ ಎ.ಪಿ ಸ್ವಾಗತಿಸಿದರು. ಸಮಯಂ ನೋಡಲ್ ಅಧಿಕಾರಿಗಳಾದ ಕಾಸರಗೋಡು ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್ ಮತ್ತು ಕಾಞಂಗಾಡ್ ಡಿವೈಎಸ್ಪಿ ಬಾಬು ಪೆರಿಂಗೋತ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯ ಸ್ಟೇಷನ್ ಹೌಸ್ ಅಧಿಕಾರಿಗಳು, ಪಿಆರ್‍ಒಗಳು ಮತ್ತು ಪಿಎಲ್‍ವಿಗಳು ಓರಿಯಂಟೇಶನ್ ತರಬೇತಿಯಲ್ಲಿ ಭಾಗವಹಿಸಿದ್ದರು.




.jpg)
