HEALTH TIPS

ಅಮೆರಿಕ ದಾಳಿ ಮಾಡುವ ಮೊದಲೇ ಯುರೇನಿಯಂ ಸಾಗಿಸಿದ್ದ ಇರಾನ್: ಯುರೋಪಿಯನ್ ಒಕ್ಕೂಟ

ಟೆಹರಾನ್‌: ಇರಾನ್‌ನ ಮೂರು ಪ್ರಮುಖ ಪರಮಾಣು ಮೂಲಸೌಕರ್ಯಗಳ ಮೇಲೆ ಅಮೆರಿಕ ದಾಳಿ ನಡೆಸಿದೆಯಾದರೂ, ಆ ದೇಶದ (ಇರಾನ್‌) ಯುರೇನಿಯಂ ಸಂಪತ್ತು ಹಾಗೆಯೇ ಇದೆ ಎಂದು ಯುರೋಪಿಯನ್ ಒಕ್ಕೂಟದ ನಾಯಕರು ಅಂದಾಜಿಸಿರುವುದಾಗಿ ಗುರುವಾರ ವರದಿಯಾಗಿದೆ.

ಪರಮಾಣು ಶಸ್ತ್ರಾಸ್ತ್ರ ತಯಾರಿಗೆ ಅಗತ್ಯವಾದಷ್ಟು ಗುಣಮಟ್ಟಕ್ಕೆ ಹತ್ತಿರದಲ್ಲಿದ್ದ ಸುಮಾರು 408 ಕೆ.ಜಿ. ಯುರೇನಿಯಂ, ದಾಳಿ ನಡೆದ ಸಂದರ್ಭದಲ್ಲಿ ಫೋರ್ಡೊ ಘಟಕದಲ್ಲಿ ಇರಲಿಲ್ಲ ಎಂಬುದು ಗುಪ್ತಚರ ಮೂಲಗಳ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂಬುದಾಗಿ ಮೂಲಗಳು ತಿಳಿಸಿವೆ ಎಂದು 'Financial Times' ವರದಿ ಮಾಡಿದೆ.

ಇಸ್ರೇಲ್‌ - ಇರಾನ್‌ ಯುದ್ಧದಲ್ಲಿ ಮಧ್ಯಪ್ರವೇಶಿಸಿದ್ದ ಅಮೆರಿಕ, ಇರಾನ್‌ನ ಅಣ್ವಸ್ತ್ರ ಯೋಜನೆಗಳನ್ನು ವಿಫಲಗೊಳಿಸುವ ನಿಟ್ಟಿನಲ್ಲಿ ಫೋರ್ಡೊ, ನತಾಂಜ್‌ ಮತ್ತು ಎಸ್ಫಹಾನ್ ಪರಮಾಣು ಮೂಲಸೌಕರ್ಯಗಳ ಮೇಲೆ ಜೂನ್‌ 21ರ ತಡರಾತ್ರಿ ದಾಳಿ ಮಾಡಿತ್ತು.

ಇದರಿಂದ ಇರಾನ್‌ಗೆ ಭಾರಿ ಹಾನಿಯಾಗಿದೆ ಎಂದು ಹೇಳಲಾಗಿತ್ತು.

ಅಮೆರಿಕ ದಾಳಿಯಿಂದ ಕೆರಳಿದ್ದ ಇರಾನ್‌, ಇಸ್ರೇಲ್‌ ವಿರುದ್ಧದ ದಾಳಿಯನ್ನು ತೀವ್ರಗೊಳಿಸಿತ್ತು. ಹಾಗೆಯೇ, ಇರಾಕ್‌, ಕತಾರ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಸೋಮವಾರ ಕ್ಷಿಪಣಿ ದಾಳಿ ಮಾಡಿತ್ತು.

ಇದರ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇಸ್ರೇಲ್‌-ಇರಾನ್ ಕದನ ವಿರಾಮವನ್ನು ಮಂಗಳವಾರ ಘೋಷಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries