ಬದಿಯಡ್ಕ: ಎಣ್ಮಕಜೆ ಪಂಚಾಯಿತಿ ಕಾಟುಕುಕ್ಕೆ ಅರೆಕ್ಕಾಡಿ ನಿವಾಸಿ ಜಯೇಶ್(35)ನಾಪತ್ತೆಯಾಗಿರುವ ಬಗ್ಗೆ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಜೂ. 9ರಂದು ಸಹೋದರಿ ಮನೆಗೆ ತೆರಳುವುದಾಗಿ ಮನೆಯಿಂದ ತೆರಳಿದ್ದು, ಅಲ್ಲಿಗೂ ತಲುಪದೆ, ಮನೆಗೂ ವಾಪಸಾಗಿಲ್ಲ. ಇವರ ಮೊಬೈಲ್‍ಗೆ ಕರೆಮಾಡಿದಾಗ ಸ್ವಿಚ್‍ಆಫ್ ಆಗಿರುವುದಾಗಿ ಇವರ ಸಹೋದರ ರಾಜೇಶ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.


