ಮುಳ್ಳೇರಿಯ: ಕುಂಬ್ಡಾಜೆ ಪಂಚಾಯಿತಿ ಚಂದ್ರಂಪಾರೆ ನಿವಾಸಿ 54ರ ಹರೆಯದ ಮಹಿಳೆಯನ್ನು ಅಸೌಖ್ಯಗೊಂಡ ಸ್ಥಿತಿಯಲ್ಲಿ ಮಲ್ಲಂಪಳ್ಳಿಯ ಬಸ್‍ತಂಗುದಾಣ ಬಳಿ ಪತ್ತೆಹಚ್ಚಲಾಗಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಎರಡು ವಾರಗಳಿಂದ ಅಮ್ಮಂಗೋಡಿನಲ್ಲಿರುವ ಪುತ್ರಿ ಮನೆಯಲ್ಲಿ ವಾಸಿಸುತ್ತಿದ್ದ ಇವರು, ಮಂಗಳವಾರ ಬೆಳಗ್ಗೆ ಪುತ್ರಿಯ ಮಗುವನ್ನು ಶಾಲೆಗೆ ಕರೆದೊಯ್ದ ನಂತರ ನಾಪತ್ತೆಯಾಗಿದ್ದರು.ಈ ಬಗ್ಗೆ ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ತನಿಖೆ ನಡೆಸುವ ಮಧ್ಯೆ ಅಸೌಖ್ಯಗೊಂಡ ಸ್ಥಿತಿಯಲ್ಲಿ ಬಸ್ ನಿಲ್ದಾಣ ಬಳಿ ಮಹಿಳೆ ಕಂಡುಬಂದಿದ್ದರು. ಇವರು ಚೇತರಿಸಿಕೊಳ್ಳುತ್ತಿದ್ದು, ನಂತರ ಇವರಿಂದ ಹೇಳಿಕೆ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

