ಕುಂಬಳೆ: ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ 2025-26 ನೇ ಸಾಲಿನ ಪ್ರವೇಶೋತ್ಸವ ಸ್ವಾಗತ ಭಾರತೀ ಕಾರ್ಯಕ್ರಮ ಸೋಮವಾರ ನಡೆಯಿತು. ಎಡನಾಡು-ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ನಟೇಶ ಮದನಗುಳಿ ಅತಿಥಿಗಳಾಗಿ ಆಗಮಿಸಿ ನೂತನ ವಿದ್ಯಾರ್ಥಿಗಳಿಗೆ ಬ್ಯಾಂಕಿನ ವತಿಯಿಂದ ಕಲಿಕೋಪಕರಣಗಳನ್ನು ನೀಡಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಾಲಕೃಷ್ಣ ಶರ್ಮಾ ಅನಂತಪುರ ಅವರು, ಭಾರತೀಯ ಸಂಸ್ಕøತಿ ನಮ್ಮ ಹೆಮ್ಮೆ, ವಿದ್ಯಾರ್ಜನೆಯೊಂದಿಗೆ ಇದು ಕೂಡಾ ನಮ್ಮಲ್ಲಿ ಬೆಳೆಯಬೇಕು ಎಂದರಲ್ಲದೆ ವಿದ್ಯಾಪೀಠ ಶಾಲೆಯು ಈ ನಿಟ್ಟಿನಲ್ಲಿ ಕಾರ್ಯಪ್ರವರ್ತವಾಗಿದೆ ಎಂದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಚೆಕ್ಕಣಿಕೆ ಶುಭ ಹಾರೈಸಿದರು. ಮುಖ್ಯ ಅಧ್ಯಾಪಕರಾದ ಶ್ಯಾಮ್ ಭಟ್ ದರ್ಬೆಮಾರ್ಗ 25ನೇ ವರ್ಷಕ್ಕೆ ಕಾಲಿಟ್ಟ ಈ ವಿದ್ಯಾ ಸಂಸ್ಥೆಯ ಹಾಗೂ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಯ ಬಗ್ಗೆ ಮತ್ತು ರಜತವರ್ಷದ ಯೋಜನೆಗಳನ್ನು ವಿವರಿಸಿ ಮಾತನಾಡಿದರು. ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಶಿಕ್ಷಕಿಯಾದ ಸೌಮ್ಯ ಸ್ವಾಗತಿಸಿ, ದೇವಿಕಾ ಮಾತಾಶ್ರೀ ವಂದಿಸಿದರು. ಶಿಕ್ಷಕಿ ಶ್ರೀದೇವಿ ನಿರೂಪಿಸಿದರು.







