ಕುಂಬಳೆ: ಉಜಾರ್-ಉಳುವಾರ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೊಸದಾಗಿ ಪ್ರವೇಶ ಪಡೆದ ಸುಮಾರು ಐವತ್ತು ಪೂರ್ವ ಪ್ರಾಥಮಿಕ ಮತ್ತು ಪ್ರಥಮ ದರ್ಜೆ ವಿದ್ಯಾರ್ಥಿಗಳಿಗೆ ಉಚಿತ ಅಧ್ಯಯನ ಸಾಮಗ್ರಿಗಳನ್ನು ಸೋಮವಾರ ವಿತರಿಸಲಾಯಿತು. ಶಾಲಾ ಪಿಟಿಎ ಸಮಿತಿಯು ಶಾಲಾ ಚೀಲ ಮತ್ತು ಸ್ಲೇಟ್ ಸೇರಿದಂತೆ ಆರು ವಸ್ತುಗಳನ್ನು ಒಳಗೊಂಡಿರುವ ಕಿಟ್ ಅನ್ನು ಒದಗಿಸಿತು. ಶಾಲಾ ಪಿಟಿಎ ಅಧ್ಯಕ್ಷ ಮುಹಮ್ಮದ್ ಕುಂಞÂ್ಞ ಉಳುವಾರ್ ವಿತರಣೆಯನ್ನು ಉದ್ಘಾಟಿಸಿದರು. ಮುಖ್ಯೋಪಾಧ್ಯಾಯಿನಿ ಸೀಮಾ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ರಜಿಯಾ ಸ್ವಾಗತಿಸಿ, ಮರಿಯಮ್ಮ ಟೀಚರ್ ವಂದಿಸಿದರು. ಪಿಟಿಎ ಉಪಾಧ್ಯಕ್ಷ ಹನೀಫ್, ಎಂಪಿಟಿಎ ಅಧ್ಯಕ್ಷೆ ಸುಹ್ರಾ, ಶಿಕ್ಷಕಿಯರಾದ ಮುಬೀನಾ, ನಿಶ್ಮಿತಾ, ರೂಪಿತಾ ಮುಂತಾದವರು ಉಪಸ್ಥಿತರಿದ್ದರು.




.jpg)

