ಉಪ್ಪಳ: ಜಿಲ್ಲೆಯ ಮಂಜೇಶ್ವರ ತಾಲೂಕಿನ ಪೈವಳಿಕೆ ನಿವಾಸಿ ಸಮಾಜ ಸೇವಕ ಪರಮೇಶ್ವರ ಪೈವಳಿಕೆ(70) ಅವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನರಾದರು.
ಪೈವಳಿಕೆ ಸೇವಾ ಸಹಕಾರಿ ಬ್ಯಾಂಕಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರು ಹಲವು ಸಂಘಸಂಸ್ಥೆಗಳಲ್ಲಿ ಗುರುತಿಸಿಕೊಂಡು ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದರು. ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂದಾಳತ್ವವನ್ನು ವಹಿಸಿದ್ದ ಅವರು ಮಡಿವಾಳ ಸಂಘದ ಪೈವಳಿಕೆ ಪಂಚಾಯಿತಿ ಸಮಿತಿ ಅಧ್ಯಕ್ಷರಾಗಿ ಮಡಿವಾಳ ಸಮಾಜದ ಅಭ್ಯದಯಕ್ಕೆ ಅಹರ್ನಿಶಿಯಾಗಿ ದುಡಿದಿದ್ದರು. ವರ್ಕಾಡಿ ಬಂಗೇರ ತರವಾಡಿನ ಹಿರಿಯ ಸದಸ್ಯರಾಗಿ ಸಮುದಾಯದ ನೋವು ನಲಿವಿನಲ್ಲಿ ಸಕ್ರಿಯರಾಗಿ ಮುಂದಾಳತ್ವವನ್ನು ವಹಿಸಿದ್ದರು. ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.





