HEALTH TIPS

ಬದಿಯಡ್ಕ: ಕಯ್ಯಾರ ಕಿಞ್ಞಣ್ಣ ರೈ ಸ್ಮಾರಕ ಗ್ರಂಥಾಲಯದಲ್ಲಿ ಕವಿಯ ಜನ್ಮ ದಿನಾಚರಣೆ

ಬದಿಯಡ್ಕ: ಕಯ್ಯಾರ ಕಿಞ್ಞಣ್ಣ ರೈಗಳು ಮುನ್ನಡೆಸಿದ ಕನ್ನಡ ಪರ ಚಳವಳಿಗಳು ಎಂದಿಗೂ ಅಪೂರ್ವವಾಗಿ ಪ್ರಚೋದನಕಾರಿಯಾದುದು. ಅವರ ಕಾವ್ಯಕ್ಕಿದ್ದ ಶಕ್ತಿ ವ್ಯವಸ್ಥೆಯನ್ನು ಬಡಿದೆಬ್ಬಿಸಬಹುದಾದ ಯುಗ ಪ್ರವರ್ತಕ ರೂಪಕ ಎಂದು ನಿವೃತ್ತ ಮುಖ್ಯೋಪಾಧ್ಯಾಯ, ಸಾಹಿತಿ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ತಿಳಿಸಿದರು.

ಬದಿಯಡ್ಕದ ಕಯ್ಯಾರ ಕಿಞ್ಞಣ್ಣ ರೈ ಸ್ಮಾರಕ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ನಡೆದ ಕವಿಯ 110ನೇ ಜನ್ಮ ದಿನಾಚರಣೆ-ಕವಿ ನಮನ ಕಾರ್ಯಕ್ರಮವನ್ನು ಕಯ್ಯಾರರ ಭಾವಚಿತ್ರಕ್ಕೆ ಪುಷ್ಪಾಂಜಲಿಗಳನ್ನು ಸಲ್ಲಿಸಿ ಉದ್ಘಾಟಿಸಿ ಅವರು ಮಾತನಾಡಿದರು.


ಸತ್ವಯುತವಾದ ಕಯ್ಯಾರ ಕಾವ್ಯಗಳು ಸಾರ್ವಕಾಲಿಕ ಮೌಲ್ಯಯುತವಾದದ್ದು. ಕಾಸರಗೋಡು ಅನ್ಯಾಯವಾಗಿ ಕೇರಳಕ್ಕೆ ಸೇರಿಕೊಂಡಾಗ ಅಂದಿನ ಕಾಲದ ಕನ್ನಡ ಕಟ್ಟಾಳುಗಳ ಜೊತೆಗೆ ಮುನ್ನೆಲೆಯಲ್ಲಿ ನಿಂತು ಸಾಹಿತ್ಯ ಸಹಿತ ವಿವಿಧ ಆಯಾಮಗಳ ಹೋರಾಟವನ್ನು ಅವರು ಮುನ್ನಡೆಸಿದ್ದರು ಎಂದು ನೆನಪಿಸಿದ ಅವರು, ಕಾಸರಗೋಡಿಗೆ ಉದ್ಯೊಗಾರ್ಥಿಗಳಾಗಿ ಬರುವ ಮಲೆಯಾಳಿಗಳು ಕನ್ನಡವನ್ನು ಕಲಿಯದೆ ಹುಂಬತನ ಮೆರೆಯುತ್ತಿರುವುದು ಹಿತಕರವಲ್ಲ ಎಂದು ತಿಳಿಸಿದರು. ಸಾಂವಿಧಾನಿಕವಾಗಿ ಇಲ್ಲಿಯ ಕನ್ನಡಿಗರಿಗೆ ವಿಶೇಷ ಹಕ್ಕುಗಳಿದ್ದು, ಅವನ್ನು ಹೊಸಕುವ ಯತ್ನಗಳು ಸಲ್ಲದು. ಭಾಷಾಪ್ರೇಮದ ಜೊತೆಗೆ ಇತರ ಭಾಷೆಗಳನ್ನು ಕಲಿಯುವ, ಅರ್ಥೈಸುವ ಮತ್ತು ವಿಘಟನೆ ಇಲ್ಲದೆ ಸಾಗುವ ಛಾತಿಯನ್ನು ನಾವು ಬೆಳೆಸಬೇಕು ಎಂದವರು ಸೂಚಿಸಿದರು. 

ಗ್ರಂಥಾಲಯ ಸಮಿತಿ ಅಧ್ಯಕ್ಷ ರಾಜೀವನ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಮಾಹಿನ್ ಕೇಳೋಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಶಿಕ್ಷಕಿ ಅನಿತಾ ಅವರು ಈ ಸಂದರ್ಭ ಮಾತನಾಡಿ, ಮಹಾನ್ ಕವಿಗಳಾಗಿದ್ದ ಕಯ್ಯಾರರು ಅವಕಾಶಗಳಿದ್ದರೂ ಬೇರೆಡೆ ಹೋಗದೆ ಹುಟ್ಟೂರಲ್ಲೇ ನಿರ್ಮಿಸಿದ ಸಾಧನೆಗಳು ಅಪೂರ್ವವಾದುದು. ಅವರು ಅಧ್ಯಕ್ಷರಾಗಿದ್ದ ವೇಳೆ ಕುಗ್ರಾಮವಾಗಿದ್ದ ವಿದ್ಯಾಗಿರಿ ಹಾಗೂ ಉದಯಗಿರಿಗಳಲ್ಲಿ ಶಿಕ್ಷಣ ಸಾಕಾರತೆಗೆ ನಿರ್ಮಿಸಿದ ಶಾಲೆಗಳು ಇಂದಿಗೂ ಮಹತ್ವಪೂರ್ವವಾಗಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳ ಸುಲಭ ಕಲಿಕೆಗಳಿಗಾಗಿ ಅವರು ರಚಿಸಿದ್ದ ಹಲವು ಪಠ್ಯ ಸಹಿತ ಇತರ ಉಪಕ್ರಮಗಳು ಗಮನಾರ್ಹವಾದುದು ಎಂದರು. ಜೊತೆಗೆ ಕಯ್ಯಾರರ ವಿವಿಧ ಕಾವ್ಯ-ಬರಹಗಳನ್ನು ಉಲ್ಲೇಖಿಸಿದರು.

ನಿವೃತ್ತ ಶಿಕ್ಷಕ ಚಂದ್ರಹಾಸ ನಂಬ್ಯಾರ್ ಉದಯಗಿರಿ, ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಶ್ರೀನಾಥ್,  ಶಿಕ್ಷಕಿಯರಾದ ಜ್ಯೋತ್ಸ್ನಾ ಕಡಂದೇಲು, ವಿದ್ಯಾ ಬಿ.ಎಚ್. ಉಪಸ್ಥಿತರಿದ್ದರು. ಶಿಕ್ಷಕ, ಗ್ರಂಥಾಲಯದ ಉಪಾಧ್ಯಕ್ಷ ನಿರಂಜನ ರೈ ಪೆರಡಾಲ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪೆರಡಾಲ ನವಜೀವನ ಶಾಲಾ ಎನ್.ಎಸ್.ಎಸ್.ಯೋಜನಾಧಿಕಾರಿ ಶ್ರೀಜ ವಂದಿಸಿದರು. ಪೆರಡಾಲ ನವಜೀವನ ಶಾಲಾ ಎನ್.ಎಸ್.ಎಸ್. ಯೋಜನೆಯ ಸ್ವಯಂಸೇವಕರು ಹಾಗೂ ಚಂದ್ರಹಾಸ ನಂಬ್ಯಾರ್ ಉದಯಗಿರಿ ಅವರು ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಿದರು. ಎನ್.ಎಸ್.ಎಸ್. ಯೋಜನಾ ಸ್ವಯಂಸೇವಕರಿಂದ ಗ್ರಂಥಾಲಯ ಪರಿಸರ ಶುಚೀಕರಣ ಈ ಸಂದರ್ಭ ನಡೆಯಿತು. 


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries