ಮಂಜೇಶ್ವರ: ಬೆಂಗಳುರಿನಿಂದ ಕೇರಳಕ್ಕೆ ಮಾದಕವಸ್ತು ಪೂರೈಸುತ್ತಿರುವ ಜಾಲದ ಪ್ರಮುಖ ಕೊಂಡಿ, ಕಣ್ಣೂರು ಪಳ್ಳಿಕುನ್ನು ಚಕ್ಕರಪಾರ ನಿವಾಸಿ ಹಂಸಾಮುಸಮಿಲ್ ಎಂಬಾತನನ್ನು ಮಂಜೇಶ್ವರ ಠಾಣೆ ಪೊಲೀಸರು ಕಣ್ಣೂರಿನಿಂದ ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಭಾರತ್ ರೆಡ್ಡಿ ನಿರ್ದೇಶದನ್ವಯ ಡಿವೈಎಸ್‍ಪಿ ಸಿ.ಕೆ ಸುನಿಲ್ ಮೇಲ್ನೋಟದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಫೆಬ್ರವರಿಯಲ್ಲಿ ಮಂಜೇಶ್ವರ ಠಾಣೆ ಪೊಲೀಸರು 75ಗ್ರಾಂ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ಬಂಧಿಸಿದ್ದು, ಇವರು ನೀಡಿದ ಮಾಹಿತಿಯನ್ವಯ ಹಂಸಾಮುಸಮಿಲ್‍ನನ್ನು ಬಂಧಿಸಲಾಗಿದೆ. ಬೆಂಗಳುರಿನಲ್ಲಿ ಫ್ಯಾಶನ್ ಡಇಸೈನರ್ ಆಗಿ ದುಡಿಯುತ್ತಿರುವ ಈತ ತನ್ನ ಕೆಲಸದ ಮೆರೆಯಲ್ಲಿ ಭಾರಿ ಪ್ರಮಾಣದಲ್ಲಿ ಮಾದಕ ದ್ರವ್ಯ ಕೇರಳಕ್ಕೆ ಸಾಗಿಸುತ್ತಿದ್ದುದಾಗಿ ಪೊಲೀಸರು ತಿಳಿಸಿದ್ದಾರೆ. ಈತನ ನಾಲ್ಕು ಬ್ಯಾಂಕ್ ಖಾತೆಗಳನ್ನು ತಪಾಸಣೆಗೊಳಪಡಿಸಿದಾಗ ಪ್ರತಿ ತಿಂಗಳು ಲಕ್ಷಾಂತರ ರೂ. ವಹಿವಾಟು ನಡೆಸುತ್ತಿರುವುದು ಬಹಿರಂಗಗೊಂಡಿದೆ. ಇವೆಲ್ಲವೂ ಮಾದಕ ದ್ರವ್ಯ ಸಾಗಾಟಕ್ಕೆ ಸಂಬಂಧಿಸಿ ಈ ವಹಿವಾಟು ನಡೆಸಿರುವುದಗಿ ಮಾಹಿತಿ ಲಭಿಸಿದೆ.

