ಕುಂಬಳೆ : ಕುಂಬಳೆ-ಬದಿಯಡ್ಕ ಕೆಎಸ್‍ಟಿಪಿ ರಸ್ತೆಯ ಭಾಸ್ಕರ ನಗರದಲ್ಲಿ ಕಾರು ಪಲ್ಟಿಯಾಗಿ, ಅದರಲ್ಲಿ ಮೂರು ಮಂದಿ ಯುವಕರು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಸೀತಾಂಗೋಳಿಯಿಂದ ಕುಂಬಳೆಗೆ ಸಂಚರಿಸುತ್ತಿದ್ದ ಕಾರು ಭಾಸ್ಕರ ನಗರದಲ್ಲಿ ರಸ್ತೆಯಿಂದ ಹೊರಕ್ಕೆ ಮಗುಚಿಬಿದ್ದಿದೆ. ಕಾರಿನೊಳಗೆ ಸಿಲುಕಿದ್ದವರನ್ನು ಸ್ಥಳೀಯರು ಅತ್ಯಂತ ಸಾಹಸದಿಂದ ಹೊರತೆಗೆದು ರಕ್ಷಿಸಿದ್ದಾರೆ. ಭಾಸ್ಕರ ನಗರದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ರಸ್ತೆ ನಿರ್ಮಿಸಿರುವುದರಿಂದ ಇಲ್ಲಿ ಅಪಘಾತ ಮರುಕಳಿಸುತ್ತಿರುವುದಾಗಿ ಸ್ಥಳೀಯರು ದೂರಿದ್ದರೆ. ಇತ್ತೀಚೆಗೆ ಒಂದು ವಾರದೊಳಗೆ ಎರಡು ಕಾರುಗಳು ಇಲ್ಲಿ ಪಲ್ಟಿಯಾಗಿದ್ದು, ಹಲವರು ಗಯಗೊಂಡಿದ್ದರು.

