ಮಂಜೇಶ್ವರ: ಜಿ.ಎಂ.ಎಲ್.ಪಿ ಶಾಲೆ ಉದ್ಯಾವರ ತೋಟ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಶಾಲಾ ಅಸೆಂಬ್ಲಿಯಲ್ಲಿ ಪರಿಸರ ದಿನಾಚರಣೆಯ ಮಹತ್ವ ಮತ್ತು ಪರಿಸರ ಮಾಲಿನ್ಯದ ಅರಿವನ್ನು ತಿಳಿಸಿ ಮುಖ್ಯ ಶಿಕ್ಷಕ ಇಸ್ಮಾಯಿಲ್ ಮೀಯಪದವು ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಪರಿಸರದಿಂದ ರಾಷ್ಟ್ರೀಯ ಹೆದ್ದಾರಿ ತನಕ ಘೋಷಣೆಗಳನ್ನು ಕೂಗುತ್ತಾ ಮಕ್ಕಳು ಅಧ್ಯಾಪಕರು ರ್ಯಾಲಿ ನಡೆಸಿದರು. ತರಗತಿಯಲ್ಲಿ ಪರಿಸರ ದಿನಾಚರಣೆಯ ವೀಡಿಯೊ ಪ್ರದರ್ಶನ ಚಿತ್ರ ರಚನೆ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಪರಿಸರದಲ್ಲಿ ಗಿಡಗಳನ್ನು ನೆಡಲಾಯಿತು. ಮುಖ್ಯ ಶಿಕ್ಷಕರು ಪ್ರತಿಜ್ಞೆ ಹೇಳಿಕೊಟ್ಟರು. ಹಿರಿಯ ಅಧ್ಯಾಪಕರಾದ ರವಿಶಂಕರ ಕೆ ಸ್ವಾಗತಿಸಿ ದಿನದ ಮಹತ್ವವನ್ನು ತಿಳಿಸಿದರು. ಅಂಗನವಾಡಿ ಅಧ್ಯಾಪಿಕೆ ಪ್ರಮೀಳ ಅಭಿಲಾಷ್ ರಾವ್ ಪಾಲ್ಗೊಂಡರು. ಮಾಫೀದ ಟೀಚರ್ ವಂದಿಸಿದರು.


